ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಿಜಾಬ್ ಗದ್ದಲ ಸಂವಿಧಾನಕ್ಕೆ ಬದ್ಧರಾಗೋಣ - ಶಿಥಿಕಂಠೇಶ್ವರ ಶ್ರೀ

ಕುಂದಗೋಳ: ಭಾರತ ಸನಾತನ ಹಿಂದೂ ಧರ್ಮದ ಸಮಾನತೆಯ ದೇಶ, ಹಿಂದೂ ಬೌದ್ಧ, ಜೈನ್, ಇಸ್ಲಾಂ ಎಲ್ಲಾ ಧರ್ಮಗಳನ್ನು ಸಮಾನತೆಯಿಂದ ಕಾಣುವ ದೇಶ, ಎಲ್ಲಾ ಧರ್ಮದ ಗುರುಗಳನ್ನು ಗೌರವದಿಂದ ಕಾಣುವ ದೇಶ, ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮಾನತೆಗಾಗಿ ಸಂವಿಧಾನ ಬರೆದಿದ್ದಾರೆ.

ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವಂತಹ ಮಕ್ಕಳು ಸಮವಸ್ತ್ರ ಧರಿಸಿಕೊಂಡು ಬರಬೇಕು. ಹಿಜಾಬ್ ಯಾವುದೇ ಕಾರಣಕ್ಕೂ ಧರಿಸಬಾರದು, ಧರ್ಮದ ಸಂಕೇತಗಳನ್ನು ತೋರಿಸಬಾರದು ಎಂದು ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಂದಗೋಳ ಪಟ್ಟಣದ ಪಂಚಗ್ರಹ ಹಿರೇಮಠದಲ್ಲಿ ಮಾಧ್ಯಮ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ನಮ್ಮ ಭಾರತ ಹಿಂದೂ ರಾಷ್ಟ್ರ, ಇಸ್ಲಾಂ ಸಮಾಜದ ಮಕ್ಕಳ ಓದಿಗಾಗಿ ಉರ್ದು ಶಾಲೆಯನ್ನು ತೆರೆದು ಕೊಟ್ಟ ಭಾವೈಕ್ಯತೆಯ ದೇಶ, ಸಂವಿಧಾನಕ್ಕೆ ಎಲ್ಲರೂ ತಲೆ ಬಾಗೋಣ.

ಪೋಷಕರು ಮತ್ತು ಮೌಲಾನಾಗಳು ಮಕ್ಕಳಿಗೆ ಹಿಜಾಬ್ ತೆಗೆದು ಶಾಲಾ-ಕಾಲೇಜಿಗೆ ತೆರಳುವಂತೆ ಹೇಳಬೇಕಾಗಿದೆ ಅಂತಲೇ ಸ್ವಾಮೀಜಿ ಹೇಳಿದರು.

Edited By : Manjunath H D
Kshetra Samachara

Kshetra Samachara

19/02/2022 06:39 pm

Cinque Terre

21.33 K

Cinque Terre

0

ಸಂಬಂಧಿತ ಸುದ್ದಿ