ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜಲಜಾಗರಣ ಅಭಿಯಾನದ ಕಾರ್ಯಾಗಾರದ ಉದ್ಘಾಟನೆ

ನವಲಗುಂದ : ವಿಶ್ವವಿಜೇತ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ನೆಹರು ಯುವ ಕೇಂದ್ರ ದಾರವಾಡ ಇವರ ಸಹಯೋಗದಲ್ಲಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಲ ಜಾಗರಣ ಅಭಿಯಾನದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಶುದ್ದ ಕುಡಿಯುವ ನೀರು ಮತ್ತು ನೀರಿನ ರಕ್ಷಣೆ ನಮ್ಮ ಆದ್ಯತೆಯಾಗಿರಬೇಕು ಭವಿಷ್ಯತ್ತಿನ ದೃಷ್ಠಿಯಿಂದ ಜಾಗತಿಕ ತಾಪಮಾನ ತಗ್ಗಿಸಬೇಕಾದ ಅನಿವಾರ್ಯತೆಯಿದೆ ಪರಿಸರ ರಕ್ಷಣೆಯ ಜವಾಬ್ದಾರಿಯುತ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಿ.ಎನ್ ಹಕ್ಕರಕಿ, ಪ್ರಾಚಾರ್ಯರಾದ ಸಂಜೋತ ಶಿರಸಂಗಿ,ಅದ್ಯಕ್ಷತೆ ವಹಿಸಿದ್ದರು. ನೆಹರು ಯುವಕೇಂದ್ರ ದಾರವಾಡದ ಜೀಲ್ಲಾ ಯುವ ಅಧಿಕಾರಿ ಗೌತಮರೆಡ್ಡಿ, ಉಪನ್ಯಾಸಕರಾದ ಬಸವರಾಜ ಸೂಡಿ, ನಿಂಗಪ್ಪ ಕುಂಬಾರ, ರವಿ ಬ್ಯಾಹಟ್ಟಿ, ಸೇವಂತಿ ಕಾಂಬಳೆ, ವಿನಾಯಕ ಮೀರಜಕರ, ಎಮ್ ಎಮ್ ಲಷ್ಕರ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/02/2022 12:07 pm

Cinque Terre

11.98 K

Cinque Terre

0

ಸಂಬಂಧಿತ ಸುದ್ದಿ