ಹುಬ್ಬಳ್ಳಿ: ನಾವೆಲ್ಲರೂ ಬದುಕಿ ಬಂದಿದ್ದೇವೆ ಎಂದರೇ ಅದಕ್ಕೆ ನಮ್ಮ ರಾಷ್ಟ್ರೀಯ ಧ್ವಜವೇ ಕಾರಣ. ರಾಷ್ಟ್ರದ ಧ್ವಜವನ್ನು ತೋರಿಸುವ ಮೂಲಕ ನಾವು ಸುರಕ್ಷಿತವಾಗಿ ತಾಯಿನಾಡು ತಲುಪಿದ್ದೇವೆ ಎಂದು ಉಕ್ರೇನ್ ನಿಂದ ಹುಬ್ಬಳ್ಳಿಗೆ ಆಗಮಿಸಿದ ವಿದ್ಯಾರ್ಥಿನಿ ನಾಝೀಲಾ ಘಾಜಿಪೂರ ಭಾವುಕವಾಗಿ ನುಡಿದರು.
ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಲ್ಲಿ ಭಾರತೀಯರಿಗೆ ಯಾರು ಕೂಡ ತೊಂದರೆ ಕೊಟ್ಟಿಲ್ಲ. ಅಲ್ಲದೇ ನಾವು ನಮ್ಮ ದೇಶದ ಧ್ವಜವನ್ನು ತೋರಿಸುವ ಮೂಲಕ ಸುರಕ್ಷಿತವಾಗಿ ಬಂದಿದ್ದೇವೆ ಎಂದರು.
ಮುಂದಿನ ಶಿಕ್ಷಣದ ಬಗ್ಗೆ ಭಾರತ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳಬೇಕು. ಈ ಬಗ್ಗೆ ಉಕ್ರೇನ್ ಸರ್ಕಾರವಾಗಲಿ ಅಥವಾ ಮೆಡಿಕಲ್ ಕಾಲೇಜು ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಹೇಳಿದರು.
Kshetra Samachara
07/03/2022 07:50 pm