ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ಬಸ್ ನಿಲ್ದಾಣಕ್ಕೆ ನಾಗಲಿಂಗ ಮಹಾಸ್ವಾಮಿ ಹೆಸರಿಡಲು ಆಗ್ರಹ

ನವಲಗುಂದ : ನವಲಗುಂದ ಬಸ್ ನಿಲ್ದಾಣಕ್ಕೆ ಜಗದ್ಗುರು ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿ ಬಸ್ ನಿಲ್ದಾಣವೆಂದು ಹೆಸರಿಡುವಂತೆ ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ಬೈಲೂರು ಆಗ್ರಹಿಸಿದರು.

ನವಲಗುಂದ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಲಿಂಗಸ್ವಾಮಿ ನವಲಗುಂದದಲ್ಲಿ ನೆಲೆಸಿದ ಪ್ರಖ್ಯಾತ ಪವಾಡ ಪುರುಷರು. ಸಿದ್ಧಾರೂಢರು, ಶಿಶುನಾಳ ಶರೀಫಜ್ಜನವರು, ಗರಗದ ಮಡಿವಾಳೇಶ್ವರ, ಹೊಸಳ್ಳಿ ಬೂದಿ ಶ್ರೀಗಳ ಸಮಕಾಲಿನರು. ನಾಗಲಿಂಗ ಶ್ರೀಗಳು ಮಾಡಿದ ಹಲವಾರು ಲೀಲೆಗಳು ಭಕ್ತರ ಮನದಲ್ಲಿ ಇನ್ನೂ ಬೇರೂರಿವೆ. ಇಂಥಹ ಹಲವಾರು ಲೀಲೆಗಳನ್ನು ಮಾಡಿದ ಶ್ರೀ ನಾಗಲಿಂಗ ಅಜ್ಜನವರು ಜೀವಂತ ಸಮಾಧಿ ಹೊಂದಿದರು.

ಅಂದಿನಿಂದ ಇಂದಿನವರೆಗೂ ಶ್ರೀ ನಾಗಲಿಂಗ ಅಜ್ಜನವರ ಪುಣ್ಯಸ್ಥಳಕ್ಕೆ ರಾಜ್ಯ-ಹೊರರಾಜ್ಯದಿಂದಲೂ ಭಕ್ತರು ಆಗಮಿಸಿ, ದರ್ಶನ ಪಡೆದುಕೊಳ್ಳುತ್ತಾರೆ. ಇಂತಹ ಪುಣ್ಯ ಸ್ಥಳವಾದ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಜಗದ್ಗುರು ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿ ಬಸ್ ನಿಲ್ದಾಣವೆಂದು ಹೆಸರಿಡುವಂತೆ ಜವಳಿ, ಕೈಮಗ್ಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಾಯುವ್ಯ ಸಾರಿಗೆ ಅಧಿಕಾರಿಗಳಿಗೆ ಸುದ್ದಿಗೋಷ್ಠಿಯಲ್ಲಿ ಮೂಲಕ ಆಗ್ರಹಿಸಿದರು.

ಇ ಸಂದರ್ಭದಲ್ಲಿ ಮಂಜುನಾಥ್ ಬೈಲೂರ್, ಮಹಾಮಂಡಳ ರಾಜ್ಯಾಧ್ಯಕ್ಷ ಡಾ. ಅಬ್ದುಲರಜಾಕ್ ನದಾಫ್, ಶಿವು ಕಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/09/2022 03:21 pm

Cinque Terre

7.56 K

Cinque Terre

3

ಸಂಬಂಧಿತ ಸುದ್ದಿ