ನವಲಗುಂದ : ರೈತರ ಕೃಷಿ ಚಟುವಟಿಕೆ ಈಗ ಚುರುಕುಗೊಂಡಿದೆ. ರೈತರು ಹೊಲದಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ರು, ಏಕಾಏಕಿ ಹೆಡೆ ಎತ್ತಿ ಬುಸುಗುಡುತ್ತಿದ್ದ ನಾಗರ ಹಾವನ್ನು ಕಂಡ ರೈತರು ಕಕ್ಕಾಬಿಕ್ಕಿಯಾಗಿದ್ದರು.
ಹೌದು... ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಹೆಗ್ಗಣ್ಣವರ ಎಂಬುವವರ ಜಮೀನಿನಲ್ಲಿ ರೈತರು ಕೆಲಸ ಮಾಡುತ್ತಿದ್ದರು. ಈ ವೇಳೆ ಪ್ರತ್ಯಕ್ಷಗೊಂಡ ನಾಗರ ಹಾವು ಹೆಡೆ ಎತ್ತಿ ಬುದುಗುಡತೊಡಗಿತ್ತು. ಅದನ್ನು ಕಂಡ ರೈತರು ಕಂಗಲಾಗಿ ಅಲ್ಲಿಂದ ಕಾಲ್ಕಿತ್ತರು.
ಗಾಬರಿಗೊಂಡ ಹೊಲದ ಮಾಲೀಕ ಕೂಡಲೇ ನರಗುಂದದ ಉರಗ ತಜ್ಞ ಬುಡ್ಡಸಾಬ ಸುರೇಭಾನ್ ಎಂಬುವವರಿಗೆ ಮಾಹಿತಿ ತಿಳಿಸುತ್ತಲೇ ಸ್ಥಳಕ್ಕೆ ಬಂದ ಅವರು ಆಕ್ರಮಣಕಾರಿಯಾಗಿ ಕಂಡ ನಾಗರಹಾವನ್ನು ಸೆರೆ ಹಿಡಿದು ಸುರಕ್ಷಿತ ಅರಣ್ಯ ಸ್ಥಳಕ್ಕೆ ಬಿಟ್ಟು ಬಂದರು.
Kshetra Samachara
29/08/2022 02:20 pm