ಕಲಘಟಗಿ: ಪಟ್ಟಣದ ಡಾ. ಫಕ್ಕಿರಪ್ಪ ನಿಗದಿ ಅವರಿಗೆ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿಯಿಂದ ದೆಹಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2022-23 ನೇ ಸಾಲಿನ ನ್ಯಾಷನಲ್ ಐಕಾನಿಕ್ ಅವಾರ್ಡ್ ನೀಡಿ ಗೌರವಿಸಿದ್ದಾರೆ.
ಹಲವು ವರ್ಷಗಳಿಂದ ಇವರ ವೈದ್ಯಕೀಯ ಹಾಗೂ ಸಾಮಾಜ ಮುಖಿ ಸೇವೆಯನ್ನು ಗುರುತಿಸಿ ಕವಿತಾ ಮೀಡಿಯಾ ಸೋರ್ಸ ಪ್ರೈ ಲಿಮಿಟೆಡ್ ಅವರು ದೆಹಲಿಯಲ್ಲಿ ದೆಹಲಿ ಕನ್ನಡ ಸಮ್ಮೇಳನ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕಾರ್ಯಕ್ರಮದ ಸಮ್ಮೇಳನದ ಅಧ್ಯಕ್ಷರಾಗಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ಹಾಗೂ ಹೈಬ್ರಿಡ್ ನ್ಯೂಸ್ ಮುಖ್ಯಸ್ಥ ಬಿ.ಎನ್ ಹೊರಪೇಟಿ ಇದ್ದರು.
ವರದಿ: ಉದಯ ಗೌಡರ
Kshetra Samachara
01/10/2022 09:33 pm