ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆ.ಎಚ್ ಪಾಟೀಲ್ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್ ಪಾಟೀಲ ಸಮೂಹ ಮಹಾವಿದ್ಯಾಲಯಗಳ ಅಡಿಯಲ್ಲಿ ದೇಶದ ಸ್ವತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವದ 76ನೇ ಧ್ವಜಾರೋಹಣ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮುಖ್ಯ ಅಥಿತಿಯಾಗಿ ಪ್ರಾದೇಶಿಕ ಸಾರಿಗೆಯ ನಿವೃತ್ತ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಸ್ವತಂತ್ರ್ಯವನ್ನು ಪಡೆದು 75 ವರ್ಷಗಳಾದರೂ ಮಾಡಿರುವ ಸಾಧನೆ ಕಡಿಮೆ. ಮಾಡಬೇಕಾದ ಕಾರ್ಯ ಇನ್ನೂ ಬಹಳಷ್ಟಿದೆ. ದೇಶಭಕ್ತಿ ನಮ್ಮ ನರನಾಡಿಗಳಲ್ಲಿರಲಿ ಎಂದರು.

ನಂತರ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಆರ್.ಕೆ ಪಾಟೀಲ್, ಸ್ವತಂತ್ರ್ಯವನ್ನು ಕೇವಲ ಬ್ರಿಟಿಷರಿಂದ ಪಡೆದ ಮುಕ್ತಿಯೆಂದು ಭಾವಿಸದೆ ಅಭಿವೃದ್ಧಿಯ ಮಾರ್ಗ ಎಂದು ತಿಳಿದು ಮುಂದೆ ಸಾಗಬೇಕಾಗಿದೆ. ಸ್ವತಂತ್ರ್ಯದ ಶತಮಾನೋತ್ಸವದ ಆಚರಣೆಯ ಹೊತ್ತಿಗೆ ದೇಶ ವಿಶ್ವದ ಅತ್ಯಂತ ಮುಂದುವರಿದ ರಾಷ್ಟ್ರವಾಗಬೇಕು. ಅದಕ್ಕೆ ಯುವಕಾರದ ನೀವೆಲ್ಲ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಮೂಲಕ ನೆರವಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಛೇರ್ಮನ್ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ ಗೌಡಪ್ಪಗೋಳ ಸ್ವಹಿತಕ್ಕಿಂತ ದೇಶ, ದೇಶದ ಸಂವಿಧಾನ, ದೇಶದ ಹಿತ ಮುಖ್ಯ ಎಂದು ನಾವು ಅರಿತಾಗ ಖಂಡಿತವಾಗಿ ವಿಶ್ವದ ಅತ್ಯಂತ ಬಲಿಷ್ಠರಾಷ್ಟ್ರ ಭಾರತವಾಗುತ್ತದೆ. ಸ್ವತಂತ್ರವೆಂದರೆ ಸರ್ವತೋಮುಖ ಬೆಳವಣಿಗೆಗೆ ಮಾರ್ಗ ಎಂದರು.

ಪ್ರಾಚಾರ್ಯ ಎಸ್.ಬಿ ಸಣಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾತಂತ್ರ್ಯ ವೆಂದರೆ ಸ್ವೇಚ್ಚಚಾರವಲ್ಲವೆಂದು ಅರಿತುಕೊಳ್ಳಬೇಕು ನಮ್ಮನ್ನು ನಾವು ಸಂವಿಧಾನದ ಚೌಕಟ್ಟಿಗೆ ಬದ್ಧರಾಗಿ ಬದುಕುವುದಾಗಿದೆ ಎಂದು ಹೇಳಿದರು.

ನಂತರ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಉಪನ್ಯಾಸಕಿ ಪ್ರಿಯಾಂಕಾ ಕಿರೆಸೂರ್ ಅಥಿತಿಗಳನ್ನು ಪರಿಚಯಿಸಿದರು. ನಂತರ ಅಥಿತಿಗಳನ್ನು ಸ್ವಾಗತಿಸಿದರು ಸಹಸಂಯೋಜಕ ಡಾ. ಶಿವರಾಮ್ ಪಾಟೀಲ ವಂದಿಸಿದರು ಉಪನ್ಯಾಸಕಿ ವನಿತಾ ಮಹೇಂದ್ರಕರ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿಗಳು ಭಾಷಣ ಮಾಡಿ ದೇಶಭಕ್ತಿ ಗೀತೆಗಳನ್ನು ಹಾಡಿ ಸಂಭ್ರಮಿಸಿದರು ಪದವಿಪೂರ್ವ ವಿಭಾಗದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಇಟಗಿ, ಉಪಾಧ್ಯಕ್ಷ ವಿ ಕೆ ರಡ್ಡೆರ, ಎಚ್ ಎಚ್ ಕಿರೆಸೂರ, ಶಂಕರ ಕುಂಬಾರ, ಎಲ್.ಎಸ್ ಪಾಟೀಲ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

16/08/2022 08:03 pm

Cinque Terre

18.65 K

Cinque Terre

0

ಸಂಬಂಧಿತ ಸುದ್ದಿ