ನವಲಗುಂದ : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸುಕ್ಷೇತ್ರ ಗುಡಿಸಾಗರ ಗ್ರಾಮದ ಶ್ರೀ ಮಜ್ಜಗದ್ಗುರು ಸಾಧು ಸಿದ್ದ ಶಿವಯೋಗಿಗಳವರ 96ನೇ ವರ್ಷದ ಜಾತ್ರಾ ಮಹೋತ್ಸವಡ ಅಂಗವಾಗಿ ಭಾನುವಾರ ಗ್ರಾಮದಲ್ಲಿ ಅತೀ ಅದ್ದೂರಿಯಿಂದ ಮೆರವಣಿಗೆಯನ್ನು ನೆರವೇರಿಸಲಾಯಿತು.
ಸಂಭ್ರಮದ ಜಾತ್ರಾ ಮಹೋತ್ಸವದಲ್ಲಿ ಗುಡಿಸಾಗರ ಗ್ರಾಮದ ಗ್ರಾಮಸ್ಥರು ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದರು.
ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಉತ್ಸವವನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಇನ್ನೊಂದೆಡೆ ಗ್ರಾಮದ ಹೆಂಗಳೆಯರು ಕುಂಭ ಹೊತ್ತು ಸಂಭ್ರಮ ಪಟ್ಟರು. ಉತ್ಸವದ ಮೆರವಣಿಗೆಯಲ್ಲಿ ಗಜರಾಜ, ಶೃಂಗಾರಗೊಂಡ ಎತ್ತುಗಳ ಚಕ್ಕಡಿ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿದ್ದರು.
Kshetra Samachara
24/07/2022 09:46 pm