ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೂರುಸಾವಿರ ಮಠದಲ್ಲಿ ಗುರು ಪೂರ್ಣಿಮೆ ವಂದನಾ ಕಾರ್ಯಕ್ರಮ

ಹುಬ್ಬಳ್ಳಿ: ಗುರು ಪೂರ್ಣಿಮೆ ಪ್ರಯುಕ್ತ ಇಂದು ಹುಬ್ಬಳ್ಳಿಯ ಪ್ರಸಿದ್ಧ ಮೂರುಸಾವಿರ ಮಠದ ಆವರಣದಲ್ಲಿ ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗೂ ಸರ್ವ ಧರ್ಮ ಸ್ವಯಂ ಸೇವಕರು ನೇತೃತ್ವದಲ್ಲಿ ಮೂರುಸಾವಿರ ಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಯವರಿಗೆ ಗುರು ಪೂರ್ಣಿಮಾ ವಂದನಾ ಕಾರ್ಯಕ್ರಮ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷರು ಈರಣ್ಣ ಎಮ್ಮಿ, ಸರ್ವ ಧರ್ಮ ಸ್ವಯಂ ಸೇವಕರು ರಾಜ್ಯಧ್ಯಕ್ಷ ಆನಂದ ಧಲಬಂಜನ, ಧಾರವಾಡ ಜಿಲ್ಲಾ ಸಲಹೆಗಾರರು ಗೋಪಾಲ ಧಾರವಾಡಕರ, ಸಿದ್ದು ಹಿರೇಮಠ, ಸುಮಾ ಹಿರೇಮಠ, ತಾರಾದೇವಿ ವಾಲಿ, ಮಹಬೂಬ್ ಅಲಿ ಸೌದಾಗರ, ಕಿರಣ್ ಇರಕಲ, ಉದಯಕುಮಾರ್ ರೋಕಡೆ, ರತನ ಗಂಗಣ್ಣವರ, ಸಾವಿತ್ರಿ ಮುತ್ತಣ್ಣವರ, ಮಾದೇವಿ ಬಡಕಣ್ಣವರು, ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

13/07/2022 10:39 pm

Cinque Terre

20.93 K

Cinque Terre

0

ಸಂಬಂಧಿತ ಸುದ್ದಿ