ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜನರ ಪುಣ್ಯದ ಕಾರ್ಯ; ಮೃತ ಮಂಗಕ್ಕೆ ಶಾಸ್ತ್ರೋಕ್ತ ಅಂತ್ಯಕ್ರಿಯೆ

ಕುಂದಗೋಳ: ಇದು ರೈತಾಪಿ ಜನರ ಧಾರ್ಮಿಕತೆಯೋ, ಪ್ರಾಣಿ ಮೇಲಿನ ವಿಶೇಷ ಪ್ರೀತಿ ಕರುಣೆಯೋ ಗೊತ್ತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ರೈತರು ವಿದ್ಯುತ್ ತಂತಿ ತಗುಲಿ ಜೀವಬಿಟ್ಟ ಮಂಗಕ್ಕೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿದ್ದಾರೆ.

ಹೌದು! ದೋ.. ಎಂದು ಸುರಿಯುವ ಮಳೆಯನ್ನು ಲೆಕ್ಕಿಸದೆ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮಸ್ಥರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಮಂಗವನ್ನು ತೆಂಗಿನಗರಿ ಕಟ್ಟಿ ಟ್ರ್ಯಾಕ್ಟರ್ ಟೇಲರ್‌ನಲ್ಲಿ ಕೂರಿಸಿ ಜಾಂಜ್ ಬಾರಿಸುತ್ತಾ ಗ್ರಾಮದಲ್ಲಿ ಮೆರವಣಿಗೆ ಮಾಡಿ ನೈವೇದ್ಯ ಸಮರ್ಪಣೆ ಮಾಡಿದ್ದಾರೆ.

ಬಳಿಕ ಗ್ರಾಮದ ಹೊರವಲಯದಲ್ಲಿ ಹೋಗಿ ಭೂಮಿ ತೊಡಿ ಹಿಂದೂಗಳ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸುರಿಯುವ ಮಳೆಯಲ್ಲಿ ತಮ್ಮ ಕೆಲಸಕ್ಕೆ ಹೊರಗೆ ಬಾರದ ಜನರ ನಡುವೆ ಮೃತಪಟ್ಟ ಮಂಗಕ್ಕೆ ಗ್ರಾಮಸ್ಥರು ಸಲ್ಲಿಸಿದ ಸೇವೆ ಎಲ್ಲೇಡೆ ಮೆಚ್ಚುಗುಗೆ ಪಾತ್ರವಾಗಿದೆ.

Edited By : PublicNext Desk
Kshetra Samachara

Kshetra Samachara

09/07/2022 09:02 am

Cinque Terre

22.02 K

Cinque Terre

1

ಸಂಬಂಧಿತ ಸುದ್ದಿ