ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ನಮ್ಮೂರ ಜಾನಪದ ಸಂಭ್ರಮ: ಹಸಿರಿನಿಂದ ಕಂಗೊಳಿಸಿದ ಕಾಲೇಜು ಆವರಣ

ಕುಂದಗೋಳ : ಕಾಲೇಜು ಆವರಣದ ಒಳಗೊಂದು ಸುಗ್ಗಿ ಸಂಭ್ರಮ… ಎಲ್ಲೆಡೆ ಹಿಗ್ಗೋ ಹಿಗ್ಗು, ನಿತ್ಯ ಪಾಠ ಬೋಧನೆ ಕೇಳುತ್ತಿದ್ದ ಮಕ್ಕಳು ಇಂದು ನಮ್ಮೂರ ಜಾನಪದ ಸಂಭ್ರಮವನ್ನು ಸವಿಯುತ್ತಿದ್ದಾರೆ.

ಹೌದು ! ಕುಂದಗೋಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ರೈತಾಪಿ ಸುಗ್ಗಿಯ ಕೂರಿಗೆ, ಕುಂಟೆ ನಾನಾ ರೈತಾಪಿ ಜನತೆ ಬಳಕೆ ಸಾಮಗ್ರಿ ಪ್ರದರ್ಶನದ ಜೊತೆಗೆ ಉತ್ತರ ಕರ್ನಾಟಕದ ಖಾದ್ಯ ತಯಾರಿಸಿ, ಅದನ್ನ ಸವಿದು ಸಂತಸ ಪಟ್ಟಿದ್ದಾರೆ.

ಇದಲ್ಲದೆ ಕಾಲೇಜು ಆವರಣದಲ್ಲೇ ಬೆಳೆದ ಸಸಿ ಇಟ್ಟು ಹಸಿರ ಪ್ರಕೃತಿ ನಿರ್ಮಾಣ ಮಾಡಿ ಕಣಗಳ ನಿರ್ಮಾಣ, ಧಾನ್ಯಗಳ ರಾಶಿ ಮಾಡಿ ಪೂಜಿಸಿ ರೈತಾಪಿ ಕುಲ ಕಸುಬನ್ನು ಆಚರಿಸಿ ಗೌರವ ತಂದಿದ್ದಾರೆ.

ಮಕ್ಕಳ ಕ್ರಿಯಾಶೀಲ ಚಟುವಟಿಕೆಗಳಿಗೆ ಶಿಕ್ಷಕರು ಅಷ್ಟೇ ಪ್ರೋತ್ಸಾಹ ತುಂಬಿದ್ದು ಇಡೀ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂಗಳದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಉತ್ಸಾಹ ಎದ್ದು ಕಾಣುತ್ತಿತ್ತು.

Edited By : Nagesh Gaonkar
Kshetra Samachara

Kshetra Samachara

08/07/2022 01:54 pm

Cinque Terre

23.95 K

Cinque Terre

0

ಸಂಬಂಧಿತ ಸುದ್ದಿ