ಕುಂದಗೋಳ: ದೇಹಕ್ಕೆ ಮುಪ್ಪೇ ಹೊರತು ಮನಸ್ಸಿಗೆ ಮುಪ್ಪಿಲ್ಲ. ಮನಸ್ಸಲ್ಲಿ ಆಸಕ್ತಿ, ಉತ್ಸಾಹ ಒಂದಿದ್ರೇ ಸಾಕು ಎಂಬಂತೆ ಆಟೋಟದ ಸಂಭ್ರಮಕ್ಕೆ ಇಲ್ಲೊಂದು ಗ್ರಾಮದಲ್ಲಿ ಹಿರಿಯ ಮಹಿಳೆಯರು ಆಡಿದ ಗ್ರಾಮೀಣ ಆಟಗಳು ನೋಡುಗರ ಮನ ಗೆದ್ದಿವೆ!
ಹೌದು... ಕುಂದಗೋಳ ತಾಲೂಕಿನ ಚಿಕ್ಕನೇರ್ತಿ ಗ್ರಾಮದಲ್ಲಿ ಭಾನುವಾರ ಅಜ್ಜಿಯಂದಿರು ಕುಂಟೆಬಿಲ್ಲೆ, ಉಸುಕಿನಲ್ಲಿ ಕಡ್ಡಿ ಹುಡುಕುವ ಆಟ, ಕಣ್ಣಾಮುಚ್ಚಾಲೆ ಆಟವಾಡಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಕೊಂಡರು.
ಸರಾಸರಿ 70ರಿಂದ 80ರ ಹರೆಯದ ವೃದ್ಧೆಯರಾದ ಈರಮ್ಮ ರೊಟ್ಟಿಗವಾಡ, ಬಸಮ್ಮ ಸಂಶಿ, ಮಾದಮ್ಮ ರೊಟ್ಟಿಗವಾಡ ಎಂಬುವವರು ತಮ್ಮ ಇಳಿವಯಸ್ಸನ್ನೂ ಮರೆತು ಆಟದಲ್ಲಿ ಪಾಲ್ಗೊಂಡ ಕ್ಷಣಗಳು... ಅವರಿಗೆ ಸಾಥ್ ನೀಡಿದ ಸ್ಥಳೀಯ ಮಹಿಳೆಯರು ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯೇ ಸರಿ. ಇಂದು ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡಿನ ಈ ಆಟಗಳಿಗೆ ಹಿರಿಯ ಜೀವಗಳು ಜೀವ ತುಂಬುತ್ತಿರುವುದು ಖುಷಿಯ ವಿಚಾರ ಅಲ್ವೇ?
Kshetra Samachara
27/06/2022 11:01 am