ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಭಗವಾನ್ ಶ್ರೀ ಶಾಂತಿನಾಥರ ಜೈನ್ ಮಂದಿರದಲ್ಲಿ ಭಗವಾನ್ ತೀರ್ಥಂಕರರಿಗೆ ಪಂಚಾಮೃತ ಕಬ್ಬಿನ ಹಾಲಿನ ಅಭಿಷೇಕ ಪೂಜೆ ನೆರವೇರಿಸಲಾಯಿತು.
ಬಳಿಕ ಗುಡೇನಕಟ್ಟಿ ಗ್ರಾಮಸ್ಥರು ಜೈನ ಧರ್ಮದ ಶ್ರಾವಕ ಶ್ರಾವಕಿಯರು ಧರ್ಮದ ಮಾರ್ಗದಲ್ಲಿ ಮಾರ್ಗದಲ್ಲಿ ಉದ್ಧರಿಸುವಂತೆ ಪ್ರಾರ್ಥನೆ ಸಲ್ಲಿಸಿ ಶತಾಯುಷಿ ಪರಮ ಪೂಜ್ಯ ಶ್ರೀ 108 ಕುಂದು ಮುನಿ ಮಹಾರಾಜರ ಪಾದುಕೆಗಳ ಸ್ಥಾಪನೆ ಮಾಡಲು ಭೂಮಿಪೂಜೆ ಮಾಡಲಾಯಿತು.
ಈ ಭೂಮಿ ಪೂಜೆ ಅಭಿಷೇಕ ಕಾರ್ಯಕ್ರಮದಲ್ಲಿ ಸಮಸ್ತ ಕುಂದಗೋಳ ತಾಲೂಕಿನ ಶ್ರಾವಕ ಶ್ರಾವಕಿಯರು ಭಾಗವಹಿಸಿ ಪೂಜೆ ಸಲ್ಲಿಸಿ ಪುನೀತರಾದರು.
Kshetra Samachara
05/05/2022 03:57 pm