ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗೋವನಕೊಪ್ಪ ಗ್ರಾಮದಲ್ಲಿ ವಿಶ್ವಗುರು ಜಯಂತ್ಯುತ್ಸವ

ಧಾರವಾಡ: ವಿಶ್ವ ಗುರು, ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಸಡಗರ ಜೋರಾಗಿದೆ. ಅದರಂತೆ ಕಣ್ಮನ ಸೆಳೆಯುವಂತಹ ಬೃಹತ್ ಶೋಭಾಯಾತ್ರೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆಯಿತು.

ಹಳ್ಳಿ ಸೊಗಡಿನ ವಾದ್ಯಗಳ ಮೇಳ ಜೊತೆ ಸಾಗಿದ ಕುಂಭಮೇಳ ಹಾಗೂ ಚಕ್ಕಡಿ ಜಾಥಾ ಬಸವಣ್ಣನವರ ಅಭಿಮಾನಿಗಳ ಹರ್ಷೋದ್ಗಾರ ಮತ್ತಷ್ಟು ಇಮ್ಮಡಿಗೊಳಿಸಿತ್ತು.

ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರವನ್ನು ಚಕ್ಕಡಿ ಬಂಡಿಯಲ್ಲಿ ಮೆರವಣಿಗೆ ಮೂಲಕ ಜಯಂತಿ ಆಚರಣೆ ಮಾಡಿದರು.

ಈ ಒಂದು ಮೆರವಣಿಗೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಧಾರವಾಡ ಮುರುಘಾಮಠದ ಶ್ರೀಗಳಾದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ವಹಿಸಿದ್ದರು. ಮೆರವಣಿಗೆ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ರಾಯಪ್ಪ ಸುಳ್ಳದ. ಶಿವಯ್ಯ ಹೊಂಗಲಮಠ, ಈರಣ್ಣ ತೋಟದ, ರಾಮ ಸೇನಾ ಜಿಲ್ಲಾ ಅಧ್ಯಕ್ಷ ವಿಜಯ ಕದಂ ಸೇರಿದಂತೆ ಊರಿನ ಪ್ರಮುಖರು ಭಾಗಿಯಾಗಿದ್ದರು.

Edited By : Manjunath H D
Kshetra Samachara

Kshetra Samachara

03/05/2022 03:55 pm

Cinque Terre

48.06 K

Cinque Terre

2

ಸಂಬಂಧಿತ ಸುದ್ದಿ