ಧಾರವಾಡ: ಜಗತ್ತಿನಲ್ಲಿಯೇ ನಮ್ಮ ಕನ್ನಡ ನಾಡಿನ ಸಾಂಸ್ಕೃತಿ ಶ್ರೇಷ್ಠವಾದಿದ್ದು, ಆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಜಾನಪದ ಹಾಡಿನಿಂದ ನಾಡಿನ ಎಲ್ಲ ಜಾತಿ ಜನಾಂಗವನ್ನು ಒಟ್ಟುಗೂಡಿಸಿ ಬೆಳೆಸುವ ಶಕ್ತಿ ಜಾನಪದದಲ್ಲಿ ಅಡಗಿದೆ ಎನ್ನುವ ದೃಷ್ಟಿಯಿಂದ ಧಾರವಾಡದ ರಂಗಾಯಣದ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದರು.
ಬದಲಾಣೆ ಈ ಸಮಯದಲ್ಲಿ ಎಲ್ಲಾ ಮಾಯವಾಗಿ ಕಂಪ್ಯೂಟರ್, ಮೊಬೈಲನಲ್ಲಿ ಹಾಡುಗಳನ್ನು ಹಾಕಿ ಕಾರ್ಯಕ್ರಮಗಳನ್ನು ನಡೆಸಿ ಸಂಸ್ಕೃತಿ ಹಾಳು ಮಾಡುತ್ತಿದ್ದು, ಎಲ್ಲ ಕಲಾವಿದರು ನೇರವಾಗಿ ಹಾಡುವುದರ ಮುಖಾಂತರ ಕಲೆ, ಸಂಸ್ಕೃತಿ ಬೆಳೆಸಬೇಕಾಗಿದೆ ಎಂದು ಜಾನಪದ ತಜ್ಞ ಶ್ರೀರಾಮು ಮೂಲಗಿ ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಅನೇಕ ಜಾನಪದ ಹಾಡುಗಳನ್ನು ಹಾಡಿ ನಿರಾಶ್ರಿತರ ಕೇಂದ್ರದ ಆಶ್ರಯದಾತರನ್ನು ರಂಜಿಸಿದರು. ಅಡಿವೆಪ್ಪ ಹೆಬಸೂರ ಹಾಗೂ ತಂಡದವರಿಗೆ ರಂಗ ಗೀತೆಗಳು ಹಾಡುವ ಮೂಲಕ ಎಲ್ಲರನ್ನೂ ಮೆಚ್ಚುಗೆ ಪಡೆದುಕೊಂಡರು.
Kshetra Samachara
10/04/2022 07:22 pm