ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಿಗದಿ ಗ್ರಾಮದಲ್ಲಿ ಖಾಲಿ ಚಕ್ಕಡಿ ಜಗ್ಗುವ ಸ್ಪರ್ಧೆ: ಯುವತಿಯೊಬ್ಬಳ ಸಾಹಸಕ್ಕೆ ಗ್ರಾಮಸ್ಥರ ಮೆಚ್ಚುಗೆ

ಧಾರವಾಡ: ಎತ್ತುಗಳಿಂದ ಚಕ್ಕಡಿ ಓಡಿಸುವ ಸ್ಪರ್ಧೆ ನೋಡಿರುತ್ತಿರಾ, ಆದ್ರೆ ಈ ಗ್ರಾಮದಲ್ಲಿ ಜಾತ್ರೆಯ ನಿಮಿತ್ತ ಯುವಕರು ಚಕ್ಕಡಿ ಜಗ್ಗುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೌದು, ಧಾರವಾಡ ತಾಲೂಕಿನ ನಿಗದಿ ಗ್ರಾಮದ ಶ್ರೀ ಮಡಿವಾಳೇಶ್ವರ ಜಾತ್ರಾ ಅಂಗವಾಗಿ ಯುವಕರಿಗಾಗಿ ಖಾಲಿ ಚಕ್ಕಡಿ ಜಗ್ಗುವ ಸ್ಪರ್ಧೆಯನ್ನು ಗ್ರಾಮದ ಹಿರಿಯರು ಹಮ್ಮಿಕೊಂಡಿದ್ದರು.

ಒಂದು ನಿಮಿಷಗಳ ಕಾಲ ಚಕ್ಕಡಿ ಜಗ್ಗುವ ಸ್ಪರ್ಧೆ ಇದಾಗಿತ್ತು. ಇನ್ನು ನಿಗದಿ, ಬೆನಕನಕಟ್ಟಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಊರಿನ ಯುವಕರು ಚಕ್ಕಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ತೋರಿದರು. ಅಲ್ಲದೆ ಯುವಕರ ಈ ಸ್ಪರ್ಧೆಯಲ್ಲಿ ಹುಲಕೊಪ್ಪದ ಯುವತಿ ಒಬ್ಬಳು ಚಕ್ಕಡಿ ಜಗ್ಗುವ ಸ್ಪರ್ಧೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ತೋರಿದ್ಳು. ಬಿಬಿಜಾನ್ ಯುವತಿ ಸಾಹಸ ಕಂಡು ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಚಕ್ಕಡಿ ಜಗ್ಗುವ ಸ್ಪರ್ಧೆಯಲ್ಲಿ ಬಹುಮಾನ ಕೂಡಾ ಏರ್ಪಡಿಸಿದ್ರು. ಅದರಂತೆ ನೂರಾರು ಯುವಕರು ಸ್ಪರ್ಧೆಯಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶನ ನೀಡಿದರು. ವಿನಯ ಹಳಿಯಾಳ, ಮೊದಲನೆಯ ಬಹುಮಾನ ವಿಜೇತರಾದರು. ಎರಡನೆಯ ಬಹುಮಾನ ಸಂತೋಷ ರೇವಣ್ಣನವರ.ಮೂರನೇ ಬಹುಮಾನ ಮೋದಿನಸಾಬ್ ದೊಡಮನಿ. ನಾಲ್ಕನೆಯ ಬಹುಮಾನ ಸಂಜು ಬಾಡದ ಯವಕ ತಮ್ಮದಾಗಿಸಿಕೊಂಡರು..

Edited By : Shivu K
Kshetra Samachara

Kshetra Samachara

09/04/2022 01:43 pm

Cinque Terre

19.03 K

Cinque Terre

0

ಸಂಬಂಧಿತ ಸುದ್ದಿ