ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಂಪ್ರದಾಯಿಕ ಉಡುಗೆಯಲ್ಲಿ ಹುಬ್ಬಳ್ಳಿ ಹೆಣ್ಣು ಮಕ್ಕಳು: ಮಹಿಳಾ ದಿನಾಚರಣೆ ಸಂಭ್ರಮ...!

ಹುಬ್ಬಳ್ಳಿ: ಅವರೆಲ್ಲ ಪಟ್ಟಣದ ಒತ್ತಡದ ಜೀವನದಲ್ಲಿ ಜೀವನ ನಡೆಸುವ ಸಿಟಿ ಜನರು. ಆದರೆ ಇಂದು ಮಾತ್ರ ಯಾವುದೇ ಹಳ್ಳಿಯ ಹೆಣ್ಣುಮಕ್ಕಳಿಗೂ ಕಡಿಮೆ ಇಲ್ಲ ಎನ್ನುವಂತೆ ಮಿಂಚುತ್ತಿದ್ದರು. ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಕಷ್ಟು ಸಂಭ್ರಮಿಸಿದ ಆ ಮಹಿಳೆಯರು ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಹುಬ್ಬಳ್ಳಿಯ ಅಕ್ಕಮಹಾದೇವಿ ಅಕ್ಕನ ಬಳಗದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಜೆ.ಸಿ.ನಗರದ ಅಕ್ಕನ ಬಳಗದ ಸಭಾಭವನದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಾಚರಣೆ ಮಾಡಿದರು. ದಿನವೂ ಮನೆ ಕೆಲಸ, ಆಫೀಸ್ ಕೆಲಸದಲ್ಲಿ ಸಾಕಷ್ಟು ಮಾನಸಿಕ ಒತ್ತಡ ಅನುಭವಿಸಿದ್ದ ಮಹಿಳೆಯರು ಒಟ್ಟುಗೂಡಿಕೊಂಡು ಅದ್ಧೂರಿಯಾಗಿ ಮಹಿಳಾ ದಿನ ಆಚರಿಸಿದರು.

ಮಹಿಳೆಯರು ಹಾಡುತ್ತಾ, ಕುಣಿಯುತ್ತ ಗೆಳತಿಯರೊಂದಿಗೆ ಸಂಭ್ರಮಿಸಿದರು. ಒಟ್ಟಿನಲ್ಲಿ ಜಂಜಾಟದ ಬದುಕಿನಲ್ಲಿ ಜಟಕಾ ಬಂಡಿ ಹೂಡಿಕೊಂಡು ಹೊಲಕ್ಕೆ ಬಂದಂತೆ ಹುಬ್ಬಳ್ಳಿ ಮಹಿಳೆಯರು ಸಾಂಪ್ರದಾಯಿಕ ಆಚರಣೆ ಮೂಲಕ ಮಹಿಳಾ ದಿನಾಚರಣೆ ಆಚರಿಸಿದರು.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

16/03/2022 04:21 pm

Cinque Terre

17.76 K

Cinque Terre

0

ಸಂಬಂಧಿತ ಸುದ್ದಿ