ಕಲಘಟಗಿ: ಬಂಜಾರ ಸಮಾಜದಲ್ಲಿ ಜನಿಸಿದ ಸೇವಾಲಾಲ್ ಮಹಾರಾಜರ ಆದರ್ಶಗಳು ಎಲ್ಲ ಸಮಾಜಕ್ಕೆ ಉತ್ತಮ ಸಂದೇಶ ಎಂದು ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹೇಳಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಸೇವಾಲಾಲ್‌ರ ೨೮೩ನೇ ಜಯಂತಿಯಲ್ಲಿ ಮಾತನಾಡಿದ ಅವರು, 'ಬಂಜಾರಾ ಸಮಾಜ ಮೂಲ ಹಿರಿಯರ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದು ಇದನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡುವುದು ಸಮಾಜದ ಕರ್ತವ್ಯವಾಗಿದೆ' ಎಂದರು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಜಿಲ್ಲಾ ಅಧ್ಯಕ್ಷ ಮಂಗಲಪ್ಪ ಲಮಾಣಿ, ಬಂಜಾರ ಸಮುದಾಯದ ಅಧ್ಯಕ್ಷ ವಾಸು ರಾಮಪ್ಪ ಲಮಾಣಿ, ರಾಮಚಂದ್ರ ಕಾರಭಾರಿ, ವಾಸು ಲಮಾಣಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅನಸೂಯ ಹೆಬ್ಬಳ್ಳಿ ಮಠ, ಉಪಾಧ್ಯಕ್ಷೆ ಯಲ್ಲವ್ವ ಸಿಗ್ಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಗೌಳಿ ಲಕ್ಷ್ಮಣ ಬೆಟಿಗೇರಿ ಉಪಸ್ಥಿತರಿದ್ದರು.
Kshetra Samachara
15/02/2022 07:43 pm