ಕುಂದಗೋಳ: ತಾಲೂಕಿನ ನೂತನ ಕಸಾಪ ಅಧ್ಯಕ್ಷರಾಗಿ ಪ್ರಭುಗೌಡ ಸಂಕಾಗೌಡಶ್ಯಾನಿ ಅವರು ನಿಕಟಪೂರ್ವ ಅಧ್ಯಕ್ಷ ಎಸ್.ಎಸ್.ಅರಳಿಕಟ್ಟಿ ಅವರಿಂದ ತಾಲೂಕು ಕಸಾಪ ಸಂಘದ ಕಾರ್ಯವೈಖರಿ ಮುನ್ನಡೆಸಲು ಕರ್ನಾಟಕ ಧ್ವಜ ಹಸ್ತಾಂತರ ಮಾಡಿಕೊಂಡು ಅಧ್ಯಕ್ಷ ಸ್ಥಾನ ಅಲಂಕರಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ಪ್ರಭುಗೌಡ ಸಂಕಾಗೌಡಶ್ಯಾನಿ, ಕನ್ನಡ ನಾಡು, ನುಡಿ ಅಭಿವೃದ್ಧಿ ವಿಚಾರದಲ್ಲಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು, ಕನ್ನಡ ಮನಸ್ಸುಗಳು ಕಸಾಪ ಅಡಿಗಲ್ಲು ಹಾಕಿದ ಬುದ್ಧಿ ಜೀವಿಗಳ ಮಾರ್ಗದರ್ಶನದಲ್ಲಿ ನಿರ್ಧಾರ ತೆಗೆದುಕೊಂಡು ಮುಂದುವರೆಯುತ್ತೇನೆ ಎಂದರು.
ಪ್ರೋ, ಎಫ್.ಬಿ.ಸೊರಟೂರ ಮಾತನಾಡಿ, ಕನ್ನಡ ಅಭಿವೃದ್ಧಿ ರಥವನ್ನು ಎಳೆಯಲು ಜಾತಿ ಮತ ಧರ್ಮ ಪಂಥದ ಸಂಕೋಲೆಗಳನ್ನು ಮೀರಿ ಶ್ರಮಿಸೋಣ ಎಂದರು. ಬಳಿಕ ಕಸಾಪ ಗೌರವಾಧ್ಯಕ್ಷ ಎ.ಬಿ.ಉಪ್ಪಿನ ಮಾತನಾಡಿ ತಾಲೂಕು ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಸಮಾರಂಭ ಮುಂದಿನ ಒಂದು ವಾರದಲ್ಲಿ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಜಿ.ಡಿ.ಘೋರ್ಪಡೆ, ಚಂದ್ರಶೇಖರ ಪಾಟೀಲ, ಎಂ.ಟಿ.ಅಕ್ಕಿ, ಎಸ್.ಸಿ.ಶಾನವಾಡ ಇತರರು ಉಪಸ್ಥಿತರಿದ್ದರು.
Kshetra Samachara
04/02/2022 04:26 pm