ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಯಣ್ಣ ಅಭಿಮಾನಿಗಳಿಂದ ಪಂಜಿನ ಮೆರವಣಿಗೆ

ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ನಗರದ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಅಲ್ಲಿಂದ ಪಂಜಿನ ಮೆರವಣಿಗೆಯೊಂದಿಗೆ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ 'ಹುತಾತ್ಮ ಮಾಲಾ' ಅಭಿಯಾನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾಕ್ ಮಾತನಾಡಿ, ಕಳೆದೆರಡು ವರ್ಷಗಳಿಂದ ಹುತಾತ್ಮ ಮಾಲಾ ಅಭಿಯಾನವನ್ನು ಮಾಡುತ್ತಾ ಬಂದಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯಲು ಹುತಾತ್ಮ ಮಾಲಾ ಅಭಿಯಾನದ ಮುಖಾಂತರ ಗೌರವ ಸಮರ್ಪಣೆ ಸಲ್ಲಿಸಲಾಗುತ್ತದೆ. ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರ ದೇಶಾಭಿಮಾನ, ಆದರ್ಶ ತತ್ವಗಳನ್ನು ತಿಳಿಸಿ ಕೊಡುವುದೇ ಹುತಾತ್ಮ ಮಾಲಾ ಅಭಿಯಾನದ ಮುಖ್ಯ ಉದ್ದೇಶ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಗದೀಶ್ ಗೋಕಾಕ್, ದೀಪಕ್ ಕಲಾಲ, ರಾಮಚಂದ್ರ ದಳವಿ, ಗಣೇಶ್ ಅಂಬಿಗೇರ, ಸಂತೋಷ್ ಬಾಯಿಗೋಳ, ಸುರೇಶ ಎಲಿಗಾರ್ ಮಂಜುನಾಥ ಸಿಂಧೆ ಅಶೋಕುಮಾರ್ ಹಾದಿಮನಿ ವಿನಾಯಕ ಹುಲಿಹಳ್ಳಿ ಹಾಗೂ ಇನ್ನೂ ಅನೇಕ ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದರು.

Edited By : Vijay Kumar
Kshetra Samachara

Kshetra Samachara

27/01/2022 03:46 pm

Cinque Terre

8.53 K

Cinque Terre

0

ಸಂಬಂಧಿತ ಸುದ್ದಿ