ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಆಧುನಿಕತೆಯಲ್ಲಿ ಜನ ಮನ ಗೆದ್ದ ವೀರವಿರಾಗಿ ಬಾಹುಬಲಿ ದೊಡ್ಡಾಟ

ಕುಂದಗೋಳ : ಅರೆ ಕಾಲ ಬದಲಾಯಿತು ಬಿಡಿ, ಆ ದೊಡ್ಡಾಟ ಸಣ್ಣಾಟ ಜಾನಪದ ಪ್ರಪಂಚ ದೂರವಾಯ್ತು, ಆಧುನಿಕತೆ ಬೆಳೆಯಿತು ಎಂಬ ಮಾತುಗಳ ನಡುವೆ ಇಲ್ಲೋಬ್ರೂ ಸದ್ದಿಲ್ಲದೇ ಕಲಾ ಸೇವೆ ಗೈದು ದೊಡ್ಡಾಟ ಪ್ರದರ್ಶಿಸಿ ಉಳಿಸಿ ಬೆಳೆಸಲು ಮುಂದಾಗಿದ್ದಾರೆ.

ಹೌದು ! ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜನೆಯಲ್ಲಿ ವಾಯ್ಸ್ ವಾಲಂಟರಿ ಆರ್ಗನೈಜೇಷನ್ ಗ್ರಾಮರಂಗ ಇಂಗಳಗಿ ಸಂಯುಕ್ತಾಶ್ರಯದಲ್ಲಿ ಸಂಘಟಿಸಿದ ನೂತನ ವೀರವಿರಾಗಿ ಬಾಹುಬಲಿ ಎಂಬ ದೊಡ್ಡಾಟ ನೆರೆದ ಸಭಿಕರ ಮನ ಗೆದ್ದಿದೆ.

ಇತ್ತಿಚೆಗೆ ಕುಂದಗೋಳದ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ನಡೆದ ದೊಡ್ಡಾಟವನ್ನು ಅಭಿನವ ಕಲ್ಯಾಣಪುರ ಬಸವಣ್ಣನವರು ಹಾಗೂ ಶಿವಾನಂದ ಮಠದ ಮಹಾಂತ ಸ್ವಾಮೀಜಿ ಕಾರ್ಯಕ್ರಮ ವೀಕ್ಷಿಸಿ ಬೇಷ್ ಎಂದರು.

ಕುಂದಗೋಳ ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗರು ಸಹ ದೊಡ್ಡಾಟ ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೇ, ವೀರವಿರಾಗಿ ಬಾಹುಬಲಿ ನಾಟಕದ ಪ್ರತಿಯೊಂದು ಪಾತ್ರಗಳು ಪ್ರೇಕ್ಷಕರ ಮನಗೆದ್ದವು, ಒಟ್ಟಾರೆಯಲ್ಲಿ ಆಧುನಿಕತೆ ಸದ್ದಿನಲ್ಲೂ ದೊಡ್ಡಾಟದ ಹುಮ್ಮಸ್ಸು ತನ್ನ ವರ್ಚಸ್ಸನ್ನೂ ಹೆಚ್ಚಿಸಿಕೊಂಡಿತು.

Edited By : Nagesh Gaonkar
Kshetra Samachara

Kshetra Samachara

10/12/2021 09:22 pm

Cinque Terre

49.9 K

Cinque Terre

0

ಸಂಬಂಧಿತ ಸುದ್ದಿ