ಹುಬ್ಬಳ್ಳಿ: ದೀಪಾವಳಿ ಹಬ್ಬ ಆಚರಣೆಯ ನಂತರದ ಮೂರನೆಯ ದಿನ ಆಚರಿಸುವ ಹಬ್ಬವೇ ಬಲಿ ಪಾಡ್ಯಮಿ. ಈ ದಿನದಂದು ರಾಕ್ಷಸರ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ. ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದು ಕರೆಯುತ್ತಾರೆ. ಈ ಹಬ್ಬವನ್ನು ಹಳ್ಳಿಗಳಲ್ಲಿ ಸಡಗರ ಸಂಭ್ರಮದಿಂದ ಹಾಗೂ ಭಕ್ತಿಯಿಂದ ಆಚರಣೆ ಮಾಡುವುದು ವಿಶೇಷ.
ಅಜ್ಞಾನವನ್ನು ನಿವಾರಿಸುವ ಕಾರ್ತಿಕ ಮಾಸ ಪ್ರಾರಂಭವಾಗುವುದೇ ಪಾಡ್ಯದಂದು, ಬೆಳಗುವ ದೀಪದ ಬೆಳಕಿನಿಂದ ದೀಪಾವಳಿಯನ್ನು ಎಲ್ಲೆಡೆ ಸಾಮಾನ್ಯವಾಗಿ ಮೂರು ದಿನ ಆಚರಿಸುತ್ತಾರೆ. ನರಕಚತುರ್ದಶಿ, ಅಮಾವಾಸ್ಯೆ ಮತ್ತು ಮೂರನೇ ದಿನವಾದ ಬಲಿಪಾಡ್ಯಮಿ. ಈ ಬಲಿಪಾಡ್ಯಮಿಯಿಂದ ಪ್ರಾರಂಭವಾಗುವ ಕಾರ್ತಿಕ ಮಾಸ ಲಕ್ಷದೀಪೋತ್ಸವ ಕೊನೆಗೊಳ್ಳುವವರೆಗೂ ಬೆಳಗುವಂತಹ ಮಾಸವಾಗಿದೆ. ಇನ್ನು ಹಸುವಿನ ಸಗಣಿ ಮೂಲಕ ಹಟ್ಟೆವ್ಬಾ ಎಂಬ ಮೂರ್ತಿ ಮಾಡಿ ತಮ್ಮ ತಮ್ಮ ಮನೆಯಲ್ಲಿ ಇಡುವುದು ಸಂಪ್ರದಾಯವಾಗಿದೆ.
Kshetra Samachara
05/11/2021 11:19 am