ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾಗರಾಜ್ ಪಟ್ಟಣ ನೇತೃತ್ವದಲ್ಲಿನ ಮಂಗಳಾರತಿ ಪುಸ್ತಕ ಬಿಡುಗಡೆಗೊಳಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ- ನಾಗರಾಜ ಪಟ್ಟಣ ಅವರ ನೇತೃತ್ವದಲ್ಲಿ ತಯಾರಿಸಿದ ದೇವಿ ಸ್ತೋತ್ರ ಹೊಂದಿರುವ ಪುಸ್ತಕವನ್ನು,

ದಸರಾ ಹಬ್ಬದ ಪ್ರಯುಕ್ತವಾಗಿ,

2020- 21 ಸಾಲೀನ ಮಂಗಳಾರತಿ ಪುಸ್ತಕವನ್ನು ನಗರದ ಗೋಕುಲ್ ಗಾರ್ಡನ್ ದಲ್ಲಿ ಶ್ರೀ ಜಗದ್ಗುರು ಮೂರುಸಾವಿರ ಮಠದ ಶ್ರೀ ಮಹಾರಾಜ ನಿರಂಜ‌ ಜಗದ್ಗುರು ಶ್ರೀ ಶ್ರೀ ಡಾ. ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಹುಡಾ ಅಧ್ಯಕ್ಷ ನಾಗುಶಾ ಕಲಬುರಗಿ, ಮಾಜಿ ಶಾಸಕ ಅಶೋಕ ಕಾಟ್ವೆ, ಎಸ್.ಎಸ್. ಸಮಾಜದ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ, ಸೇರಿದಂತೆ ಎಸ್ ಎಸ್‌ಕೆ‌‌ ಸಮಾಜದ ಮುಖಂಡರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಅಶ್ವಿನಿ ನಾಗರಾಜ ಪಟ್ಟಣ ಅವರ ಸಹಯೋಗದೊಂದಿಗೆ, ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯವನ್ನು ಸಹ ಜರುಗಿತು.

ಈ ಮಂಗಳಾರತಿ ಪುಸ್ತಕವನ್ನು ಸತತವಾಗಿ ಆರು ವರ್ಷಗಳಿಂದ ದಸರಾ ಹಬ್ಬದ ಪ್ರಯುಕ್ತ ಜನರಿಗೆ ನೀಡುತ್ತಾ ಬಂದಿದ್ದಾರೆ. ಈ ಪುಸ್ತಕದಲ್ಲಿ ದೇವಿ ಸ್ತೋತ್ರಗಳಿದ್ದು ಸಾರ್ವಜನಿಕರು ಭಕ್ತಿಗೆ ಅನುಕೂಲವಾಗಿದ್ದು, ಈ ಕಾರ್ಯಕ್ರಮಕ್ಕೆ ನೂರಾರು ಮಹಿಳೆಯರು ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

08/10/2021 08:19 pm

Cinque Terre

24.05 K

Cinque Terre

0

ಸಂಬಂಧಿತ ಸುದ್ದಿ