ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೋಡ ಬನ್ನಿ ಹೂಬಳ್ಳಿಯಲ್ಲಿ ಹಬ್ಬದ ಸಂಭ್ರಮ: ಮಹಿಳೆಯರ ದಾಂಡಿಯಾ ಕಾರ್ಯಕ್ರಮ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಾಡ ಹಬ್ಬ ದಸರಾ ಆರಂಭದ ದಿನದಿಂದಲೇ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಮಹಿಳೆಯರಿಗಂತೂ ಒಂಬತ್ತು ದಿನಗಳ ನವರಾತ್ರಿ ಹಬ್ಬ ನವಚೈತನ್ಯವನ್ನು ಹುಟ್ಟು ಹಾಕಿದ್ದು, ಸಂಭ್ರಮ ಎಲ್ಲೆಡೆಯೂ ಮನೆ ಮಾಡಿದೆ. ಹಾಗಿದ್ದರೇ ನೋಡಿ ಹೂಬಳ್ಳಿಯ ಮಹಿಳಾ ಮಣಿಗಳ ಸಂಭ್ರಮ..

ಎಲ್ಲೆಡೆಯೂ ರಂಗುರಂಗಿನ ಚಿತ್ತಾರ. ಮನಮೋಹಕ ಬಣ್ಣದ ಉಡುಗೆ ತೊಡುಗೆ ಇಂತಹ ದೃಶ್ಯಗಳು ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ನವನಗರದ ಶಿವಾನಂದಮಠದ ಸಮುದಾಯ ಭವನದಲ್ಲಿ. ಹೌದು..ನವರಾತ್ರಿ ಹಬ್ಬದ ಮೊದಲ ದಿನವಾದ ಇಂದು ಹೊಸ ಬೆಳಕು ಮಹಿಳಾ ಮಂಡಳದ ವತಿಯಿಂದ ಮತ್ತು ಶ್ರೀ ವಾಗ್ದಾವಿ ಎಜುಕೇಶನ್ ಸೊಸೈಟಿಯಲ್ಲಿ ದಸರಾ ಉತ್ಸವ ನಿಮಿತ್ಯವಾಗಿ ದಾಂಡಿಯಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಮಹಿಳೆಯರು ಸಾಂಸ್ಕೃತಿಕ ನೃತ್ಯದ ಮೂಲಕ ವಿನೂತನವಾಗಿ ಆಚರಣೆ ಮಾಡಿದರು. ಇನ್ನೂ ಕಾರ್ಯಕ್ರಮಕ್ಕೆ ಕೆ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಅಲ್ಲದೇ ಚಂದ್ರಶೇಖರ ಮನಗುಂಡಿ, ಉಮೇಶ ಹೆಬಸೂರ, ಮಂಜುನಾಥ ಹೆಬಸೂರ, ಮಂಜುನಾಥ ಮುರಳ್ಳಿ, ಶ್ರೀ ದೊಡ್ದಮನಿ ನೇತೃತ್ವದಲ್ಲಿ ಮಹಿಳೆಯರು ದಾಂಡಿಯಾ ಕಾರ್ಯಕ್ರಮಕ್ಕೆ ಹೊಸ ಮೆರಗನ್ನು ನೀಡಿರುವುದು ವಿಶೇಷವಾಗಿದೆ.

Edited By : Nagesh Gaonkar
Kshetra Samachara

Kshetra Samachara

07/10/2021 10:33 pm

Cinque Terre

63.09 K

Cinque Terre

1

ಸಂಬಂಧಿತ ಸುದ್ದಿ