ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಂಗೀತದ ತವರೂರಲ್ಲಿ ಸವಾಯಿ ಗಂಧರ್ವರ 69ನೇ ಪುಣ್ಯಸ್ಮರಣೆ

ಕುಂದಗೋಳ : ಕುಂದಗೋಳ ಪಟ್ಟಣದ ಸಂಗೀತದ ತವರೂರು ಇಲ್ಲಿ ಸಂಗೀತ ಕ್ಷೇತ್ರಕ್ಕೆ ಈ ಪಟ್ಟಣ ತನ್ನದೇ ಆದ ಕೊಡುಗೆ ನೀಡಿದೆ ರಾಜ ಮಹಾರಾಜರ ಇಲ್ಲಿನ ನಾಡಗೀರ ದೇಸಾಯಿ ವಾಡೆಯಲ್ಲಿ ಸಂಗೀತ ಕಚೇರಿ ನಡೆಸಿದ ಉಲ್ಲೇಖ ಮರೆಯುವಂತಿಲ್ಲ ಎಂದು ಖಾಸಗಿ ದಿನಪತ್ರಿಕೆ ಮುಖ್ಯ ಸಂಪಾದಕ ಮೋಹನ್ ಹೆಗ್ಡೆ ಹೇಳಿದರು.

ಅವರು ಕುಂದಗೋಳ ಪಟ್ಟಣದ ಹರಭಟ್ಟ್ ಶಾಲಾ ಆವರಣದಲ್ಲಿ ನಡೆದ ಸವಾಯಿ ಗಂಧರ್ವರ 69ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸವಾಯಿ ಗಂಧರ್ವರ ಮೂರ್ತಿಗೆ ಪುಷ್ಪ ಸಮರ್ಪಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸವಾಯಿ ಗಂಧರ್ವರ ಆರಂಭದ ಮತ್ತು ಚರಿತ್ರೆ ದಿನಗಳನ್ನು ಮೆಲುಕು ಹಾಕಿದರು.

ಈ ವೇಳೆ ನುರಿತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನೆರವೇರಿದವು, ಪಟ್ಟಣದ ಪ್ರಮುಖರಾದ ಅರವಿಂದಪ್ಪ ಕಟಗಿ, ಟಿ.ಎಸ್.ಗೌಡಪ್ಪನವರ, ಈಶಣ್ಣ ನಾವಳ್ಳಿ, ಜಿತೇಂದ್ರ ಕುಲಕರ್ಣಿ, ಶಂಕರಗೌಡ ದೊಡ್ಡಮನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

30/09/2021 07:57 pm

Cinque Terre

25.43 K

Cinque Terre

0

ಸಂಬಂಧಿತ ಸುದ್ದಿ