ಕುಂದಗೋಳ : ತಾಲೂಕಿನ ಕೊಡ್ಲಿವಾಡ ಗ್ರಾಮದಲ್ಲಿ ವೀರಭದ್ರೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮ ಜರುಗಿದವು. ಇಂದು ಬೆಳಿಗ್ಗೆ ವೀರಭದ್ರೇಶ್ವರ ಮೂರ್ತಿಗೆ ದೇವಸ್ಥಾನದ ಅರ್ಚಕರು ರುದ್ರಾಭಿಷೇಕ ಮಾಡಿ ತದನಂತರ ದೇವಸ್ಥಾನ ಪುರುವಂತರು ವಿವಿಧ ವೇಷಧಾರಿಗಳು ವೀರಭದ್ರ ದೇವರ ಪವಾಡ ಇತಿಹಾಸ ಹೇಳುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರ ದೇವರ ಮೆರವಣಿಗೆ ಮಾಡಲಾಯಿತು.
ಬಳಿಕ ದೇವಸ್ಥಾನದಲ್ಲಿ ಮುತ್ತೈದೆಯರು ತೊಟ್ಟಿಲೋತ್ಸವ ಕಾರ್ಯಕ್ರಮ ಮಾಡಿ ಉಡಿ ತುಂಬಿಸಿದರು, ಮೆರವಣಿಗೆ ದೇವಸ್ಥಾನಕ್ಕೆ ಬಂದ ನಂತರ ಮಹಾ ಮಂಗಳಾರತಿ ಮಾಡಿ ವಿರಭದ್ರೇಶ್ವರ ದರ್ಶನಕ್ಕೆ ಬಂದಂತಹ ಸಕಲ ಸಕಲ ಭಕ್ತ ಮಹಾ ಜನತೆಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎ.ಬಿ.ಉಪ್ಪಿನ ಸದಸ್ಯರಾದ ಚೆನ್ನಯ್ಯ ಪೂಜಾರ. ಗ್ರಾಮದ ಹಿರಿಯರಾದ ವಿಜಯಕುಮಾರ ಉಳವಪ್ಪನವರ. ಹನುಮಂತಪ್ಪ ಶೇರಿಗಾರ ಭಾಗವಹಿಸಿದ್ದರು.
Kshetra Samachara
14/09/2021 11:04 pm