ಕುಂದಗೋಳ : ಏಳು ಕೋಟಿ ಏಳು ಕೋಟಿ ಎಂಬ ಭಕ್ತಿಯ ಕೂಗಿನ ಮಧ್ಯೆ ಮೈಲಾರಲಿಂಗೇಶ್ವರನಿಗೆ ಚಾಕರಿ ಗೈಯುವ ಭಕ್ತಾದಿಗಳು. ಚಾಂಗಮಲೋ ಚಾಂಗಮಲೋ ಎಂದು ಮೈಲಾರಲಿಂಗೇಶ್ವರನ ವೇಷ ತೊಟ್ಟು ಪಲ್ಲಕ್ಕಿ ಹೊತ್ತ ಗೋರವಯ್ಯಗಳು. ತಮ್ಮ ತಮ್ಮ ಗ್ರಾಮದಲ್ಲೇ ಮೈಲಾರಲಿಂಗೇಶ್ವರನ ಜಾತ್ರಾ ಸೊಬಗನ್ನು ಸೃಷ್ಟಿಸಿ ಆನಂದಿಸಿದ ಹಳ್ಳಿಗರು.
ಇವೆಲ್ಲಾ ಜಾತ್ರಾ ಸಂಭ್ರಮದ ದೃಶ್ಯಗಳು ಕಂಡು ಬಂದಿದ್ದು ಕುಂದಗೋಳ ತಾಲೂಕಿನ ಬೆನಕನಹಳ್ಳಿ, ಯಲಿವಾಳ, ಕುಂದಗೋಳ, ದೇವನೂರು, ರೊಟ್ಟಿಗವಾಡ ಸೇರಿದಂತೆ ಬಹುತೇಕ ಹಳ್ಳಿಯ ಭಕ್ತಾದಿಗಳು ತಮ್ಮ ಊರಿನಲ್ಲೇ ಮೈಲಾರಲಿಂಗೇಶ್ವರನ ಜಾತ್ರೆ ಆಚರಿಸಿದರು.
ಕೊರೊನಾ ಕಾರಣ ಬಳ್ಳಾರಿ ಜಿಲ್ಲಾ ಹೂವಿನಹಡಗಲಿ ತಾಲೂಕಿನ ದೊಡ್ಡ ಮೈಲಾರದ ಜಾತ್ರೆ ರದ್ದಾದ ಕಾರಣ ಭಕ್ತರು ತಮ್ಮ ತಮ್ಮ ಗ್ರಾಮಗಳಲ್ಲಿಯೇ ಭಕ್ತಿ ನೆಲೆಯನ್ನು ಕಂಡುಕೊಂಡರು ಜಾತ್ರಾ ಆನಂದಿಸಿದರು.
ಮೈಲಾರಲಿಂಗೇಶ್ವರನ ಶಿಬಾರಗಟ್ಟಿಗೆ ನೈವೇದ್ಯ ಮಾಡಿ ಚಾಕರಿ ಮಾಡಿ ಗೋರವಯ್ಯಗಳ ವಿವಿಧ ಶಸ್ತ್ರಾಸ್ತ್ರಗಳ ಪವಾಡ ಮೂಲಕ ಜಾತ್ರೆ ಆಚರಿಸಿದರೆ ಇಡೀ ಊರಿನ ಗ್ರಾಮಸ್ಥರಿಗೆ ಬೆಲ್ಲದ ಬೆಳೆ ಬಿಚಕಡಬು ಹಾಗೂ ಚಪಾತಿ ಅನ್ನ ಸಾಂಬಾರು ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೈಲಾರಲಿಂಗೇಶ್ವರನ ಜಾತ್ರೆ ರದ್ದಾದ ಕಾರಣ ಗ್ರಾಮದಲ್ಲಿ ಜಾತ್ರಾ ಸೊಬಗನ್ನು ಭಕ್ತರು ಸವಿಯುವಂತಾಯಿತು.
Kshetra Samachara
28/02/2021 02:46 pm