ಹುಬ್ಬಳ್ಳಿ- ರೌಂಡ್ ಟೇಬಲ್ 37 ಹಾಗೂ ಲೇಡಿಸ್ ಸರ್ಕಲ್ ವತಿಯಿಂದ ಬಡ ಮಹಿಳೆಯರು ಸ್ವಂತ ಉದ್ಯೋಗ ಮಾಡಲಿ ಎಂಬ ಉದ್ದೇಶದಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದರು.
ಹೌದು,, ಸುಮಾರು ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ರೌಂಡ್ ಟೇಬಲ್ 37 ಹುಬ್ಬಳ್ಳಿ, ಮತ್ತು ಲೇಡಿಸ್ ಸರ್ಕಲ್ 45 ಸಂಸ್ಥೆ, ನೂರಾರು ಬಡವರಿಗೆ ನಿರ್ಗತಿಕರಿಗೆ ಸಹಾಯ ಹಸ್ತ ಚಾಚುತ್ತಾ ಬಂದಿದೆ. ಅದೇರೀತಿ ಇಂದು ಕೊರೊನಾ ಸಂಕಷ್ಟಕ್ಕೆ ಸಿಲುಕಿ ಉದ್ಯೋಗ ಕಳೆದುಕೊಂಡಿರುವ ಬಡ ಮಹಿಳೆಯರಿಗೆ, ಸ್ವಂತ ಉದ್ಯೋಗ ಮಾಡಲೆಂದು ಹೊಲಿಗೆ ಯಂತ್ರ ನೀಡಿ ಮಹಿಳೆಯರು ಅಬಲೆ ಅಲ್ಲಾ ಸಬಲೆ ಎನ್ನುವ ರೀತಿಯಲ್ಲಿ ಎಲ್ಲರೂ ತಮ್ಮ ಸ್ವಂತ ಉದ್ಯೋಗ ಮಾಡಿಕೊಂಡು ಜೀವನ ರೋಪಿಸಿಕೊಳ್ಳಬೇಕು, ಅದರಂತೆ ಇಂತಹ ಇನ್ನೂ ಹೆಚ್ಚು ಕಾರ್ಯಕ್ರಮದ ಜೊತೆಗೆ ಸಹಾಯ ಚಾಚುವ ಉದ್ದೇಶ ಹೊಂದಿದೆ,ಎಂದು ಸಂಸ್ಥೆಯ ಸದಸ್ಯ ಹಾಗೂ ಮುಖ್ಯಸ್ಥರು ತಿಳಿಸಿದರು..
Kshetra Samachara
28/02/2021 12:04 pm