ಕುಂದಗೋಳ : ಸಂಸ್ಕಾರವಂತ ಮನೆ ಸಂಸ್ಕಾರವಂತ ಮಠ ಮನುಷ್ಯನ ಬಾಳಿನಲ್ಲಿ ಏಳ್ಗೆಯನ್ನು ತರುತ್ತವೆ. ಅಂತಹ ಸಂಸ್ಕಾರವನ್ನು ಬಿತ್ತಿ ಅನ್ನ ಅಕ್ಷರ ದಾಸೋಹ ನೀಡಿದ ಶ್ರೀ ಶಿವಾನಂದ ಮಠದ ಎಂದಿಗೂ ಶ್ರೇಷ್ಠವಾದುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಅವರು ಕುಂದಗೋಳ ಪಟ್ಟಣದ ಜೆ.ಎಸ್.ಎಸ್. ವಿದ್ಯಾಪೀಠದ ಆವರಣದಲ್ಲಿ ನಡೆದ ಪರಮ ಪೂಜ್ಯ ಬಸವೇಶ್ವರ ಮಹಾಸ್ವಾಮಿಗಳ 36ನೇ ಪುಣ್ಯಾರಾಧನೆ, ಶಿವಾನಂದ ಮಠದ ಸಂಸ್ಥಾಪಕ ಬಸವರಾಜ ಮಹಾಸ್ವಾಮಿಗಳ 14ನೇ ಪುಣ್ಯಾರಾಧನೆ ಶಾಂತಯೋಗಿ ಲಿಂಗೈಕ್ಯ ಬಸವೇಶ್ವರ ಮಹಾಸ್ವಾಮಿಗಳ 2ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಗದ್ದುಗೆ ದರ್ಶನ ಪಡೆದು ಮಾತನಾಡಿ ಮಠ ಮಾನ್ಯಗಳು ವಿದ್ಯಾದಾನ ಅಕ್ಷರ ಜ್ಞಾನದ ಕೇಂದ್ರ ಬಿಂದುವಾಗಬೇಕು ಈ ಮಠ ಆ ಕೆಲಸ ಅಚ್ಚುಕಟ್ಟಾಗಿ ನಿಭಾಯಿಸಿದೆ ಎಂದರು.
ಬಳಿಕ ಶಿವಾನಂದ ಮಠದ ಪ್ರಸ್ತುತ ಸ್ವಾಮಿಜೀಗಳು ಹಾಗೂ ಕುಂದಗೋಳ ತಾಲೂಕಿನ ರಾಜಕೀಯ ಮುಖಂಡರು ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಸ್.ಏ.ಚಿಕ್ಕನಗೌಡರ, ಮಾಜಿ ಶಾಸಕ ಎಮ್.ಎಸ್.ಅಕ್ಕಿ ಹಾಗೂ ಬಿಜೆಪಿ ಮುಖಂಡ ಎಮ್.ಆರ್.ಪಾಟೀಲ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.
ಶಿವಾನಂದ ಮಠದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಠದಲ್ಲಿ ಶಿಕ್ಷಣ ಪಡೆದಂತಹ ಹಳೆಯ ವಿದ್ಯಾರ್ಥಿಗಳು ಮರಳಿ ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದರು.
ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಂದಗೋಳ ತಾಲೂಕಿನ ಸುತ್ತ ಮುತ್ತಲಿನ ಹಳ್ಳಿಗರು ಹಾಗೂ ವಿದ್ಯಾರ್ಥಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
Kshetra Samachara
26/02/2021 06:55 pm