ಕಲಘಟಗಿ:ತಾಲೂಕಿ ಜಿನ್ನೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿಎಂಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಾಗೂ ದಾನಿಗಳಿಗೆ ಸನ್ಮಾನ ನಡೆಸಲಾಯಿತು.
ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಲೋಕನಗೌಡ ವೀರನಗೌಡ ಗರಗ 10 ಸಾವಿರ, ಗ್ರಾ. ಪಂ ಸದಸ್ಯ ಉಳವಪ್ಪ ಮರಿಕಲ್ಲಪ್ಪ ಅಗಡಿ 10 ಸಾವಿರ,ಮಂಜುನಾಥ ಚನ್ನಪ್ಪ ಅಗಡಿ 5 ಸಾವಿರ,ದಾನಪ್ಪ ಮಾರುದ್ರಪ್ಪ ಅಗಡಿ 5 ಸಾವಿರ,ಮಹೇಶ ಚನಬಸಪ್ಪ ವೀರಾಪೂರ 2,500,ಚನಬಸಪ್ಪ ಸಣ್ಣಪಕ್ಕಿರಪ್ಪ ಕುರುಬರ 2,500, ಸುರೇಶ ಚಂಬಣ್ಣ ಬಡಿಗೇರ ಪ್ರಕಾಶ ಈರಪ್ಪ ಬಡಿಗೇರ, ಬಿಎಂಟಿಸಿ ನೌಕರ 2,500 ರೂಪಾಯಿಗಳ್ನು ಶಾಲೆಗೆ ದೇಣಿಗೆ ನೀಡಿದ್ದಾರೆ.
ದಾನಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ಜಿ.ಎಂ ರೊಟ್ಟಿ, ಎಸ್.ಡಿ.ಎಂ.ಸಿ ಹಾಗೂ ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಹಾಗೂ ಪಾಲಕರು ಶಾಲೆಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
25/02/2021 08:11 pm