ಧಾರವಾಡ: ಮರಾಠಾ ವಿದ್ಯಾಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ 2020-21 ನೇ ಸಾಲಿನ ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಂಸ್ಕ್ರತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೋ. ರವೀಂದ್ರನಾಥ್ ಎನ್ ಕದಂ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಗೌರವ ಕಾರ್ಯದರ್ಶಿ ರಾಜು ಬಿರಜೆನವರ ಹಾಗೂ ನಿರ್ದೇಶಕ ಮಂಡಳಿಯ ಶಿವಾಜಿ ಸೂರ್ಯವಂಶಿ, ಸಂತೋಷ ಬಿರ್ಜೆನ್ನವರ, ಅನಿಲ ಭೋಸಲೆ, ಸುನಿಲ್ ಮೋರೆ, ರಾಜು ಕಾಳೆ, ಡಾ. ರಾಜು ರೊಖಡೆ, ಮಹೇಶ್ ಚವ್ಹಾಣ, ಸುನಿಲ್ ಶಿಂಧೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಎಮ್.ಎಸ್. ಗಾಣಿಗೇರ, ಶಿಕ್ಷಕ ವೃಂದ ಮತ್ತು ವಿಧ್ಯಾರ್ಥಿ ಪ್ರತಿನಿಧಿಗಳಾದ ಶಾನು ಮುಲ್ಲಾ ಹಾಗೂ ಅಶ್ವೀನಿ ಪಟ್ಟಣಶೆಟ್ಟಿ ಸೇರಿದಂತೆ ವಿಧ್ಯಾರ್ಥಿಗಳು ಹಾಜರಿದ್ದರು.
Kshetra Samachara
14/02/2021 11:27 am