ಹುಬ್ಬಳ್ಳಿ: ಅವರೆಲ್ಲ ವಾಣಿಜ್ಯನಗರಿ ಹುಬ್ಬಳ್ಳಿಯ ಹಳೆಯ ವಿದ್ಯಾರ್ಥಿಗಳು. ಇಷ್ಟುದಿನ ಶಾಲೆಗಳಿಗೆ ಬಣ್ಣ ಹಚ್ಚುವ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಜೋಡಿಸಿದ್ದರು.ಈಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಹಾಗಿದ್ದರೇ ಯಾರು ವಿದ್ಯಾರ್ಥಿಗಳು ಅವರು ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಬಣ್ಣ ಬಣ್ಣದ ಚಿತ್ತಾರಗಳು..ಆಕರ್ಷಕ ವರ್ಣರಂಜಿತ ಕಲೆಗಳಿಗೆ ಸಾಕ್ಷಿಯಾಯಿತು. ವಿಶೇಷಚೇತನ ಮಕ್ಕಳ ಚಿತ್ರಕಲೆ ಹೌದು. ದೇಶಪಾಂಡೆ ನಗರದ ರೋಟರಿ ಶಾಲೆ ಪಕ್ಕದಲ್ಲಿ ಇರುವ ಸರ್ಕಾರಿ ವಿಶೇಷಚೇತನ ಮಕ್ಕಳ ಶಾಲೆಯಲ್ಲಿ ಶ್ರೀಸಿದ್ಧಾರೂಡ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದು,ವಿಶೇಷಚೇತನ ಮಕ್ಕಳಲ್ಲಿ ಇರುವ ಕಲೆಯನ್ನು ಹೊರ ತರುವ ಸದುದ್ದೇಶದಿಂದ ಇಂತಹದೊಂದು ಮಹತ್ವದ ಕಾರ್ಯಕ್ಕೆ ಹಳೆಯ ವಿದ್ಯಾರ್ಥಿಗಳ ಸಂಘ ಮುಂದಾಗಿರುವುದು ವಿಶೇಷವಾಗಿದೆ.
ಶ್ರೀಸಿದ್ಧಾರೂಡ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜನೆ ಮಾಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ತಮ್ಮಲ್ಲಿರುವ ಕಲೆಯನ್ನು ವಿಶೇಷಚೇತನ ಮಕ್ಕಳು ಪ್ರದರ್ಶಿಸಿದರು.ಇನ್ನೂ ಮಕ್ಕಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿ ಮಕ್ಕಳಿಗೆ ಮನರಂಜನೆ ನೀಡುವ ಮೂಲಕ ಸ್ಪರ್ಧಾತ್ಮಕವಾಗಿ ಭಾಗವಹಿಸುವಂತೆ ಈ ಸ್ಪರ್ಧೆ ಮಾಡಿದ್ದು,ನಿಜಕ್ಕೂ ವಿಶೇಷವಾಗಿದೆ.
ಒಟ್ಟಿನಲ್ಲಿ ವಿಶೇಷಚೇತನ ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ದೂರ ಉಳಿಯಬಾರದು ಎಂಬುವಂತ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು,ಮಕ್ಕಳು ಭಾಗವಹಿಸಿ ಸಂತಸಪಟ್ಟರು.
Kshetra Samachara
13/02/2021 12:58 pm