ಹುಬ್ಬಳ್ಳಿ : ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಪ್ರೇರೇಪಿಸುವ ಹಾಗೂ ಕವನಗಳನ್ನು ರಚಿಸುವ "ಕಾವ್ಯಚಿಗುರು '' ಕಾರ್ಯಾಗಾರ ಸೋಮವಾರ ದಿ. 8 ರಂದು ಮುಂಜಾನೆ 11:30 ಕ್ಕೆ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಸರಕಾರಿ ಪ್ರೌಢಶಾಲೆ ಯಲ್ಲಿ ನಡೆಯಲಿದೆ.
ಕಲಘಟಗಿ ತಾಲೂಕಾ ಕಸಾಪ ಅಧ್ಯಕ್ಷೆ ಶ್ರೀಮತಿ ಅನಿತಾ ಹತ್ತಿ, ಮಾಜಿ ಅಧ್ಯಕ್ಷ ಎಂ.ಎಂ ಪುರದನಗೌಡರ ಹಾಗೂ ಮಕ್ಕಳ ಸಾಹಿತಿ ವೈ.ಜಿ ಭಗವತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ ಶಿವನಗೌಡ ಪಾಟೀಲ ಅಧ್ಯಕ್ಷತ ವಹಿಸಲಿದ್ದಾರೆ. ಜಿಲ್ಲಾಧ್ಯಕ್ಷ ಎಲ್.ಆರ್ ಅಂಗಡಿ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.
ಧಾರವಾಡ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಹಾಗೂ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಕಳೆದ ಹನ್ನೆರಡು ವರ್ಷ ಗಳಿಂದ ಇಂತಹ ಕಮ್ಮಟಗಳನ್ನು ಅಯೋಜಿಸುತ್ತ ಬರುತ್ತಿರುವ ಸುನಿಧಿ ಕಲಾ ಸೌರಭ ಸಂಸ್ಥೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತ ಬಂದಿದೆ.
ಮಹಾಮಾರಿ ಕೊರೊನಾದಿಂದಾಗಿ ತತ್ತರಿಸಿದ ಇಡೀ ದೇಶವೇ ಈಗ ಮತ್ತೆ ಸಹಜ ಸ್ಥಿತಿಗೆ ತಲುಪುವ ಹಾದಿಯಲ್ಲಿದೆ.... ಮಕ್ಕಳಿಗೆ ಅನೇಕ ತಿಂಗಳಗಳ ನಂತರ ಶಿಕ್ಷಣ ಸಂಸ್ಥೆಗಳ ಬಾಗಿಲು ತೆರದಿವೆ. ಈ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಪ್ರೇರೇಪಿಸುವ ಕಾವ್ಯಚಿಗುರು ಕವನಗಳನ್ನು ರಚಿಸುವ ಕಾರ್ಯಾಗಾರವನ್ನು ಆಯೋಜಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಸುಭಾಸ ನರೇಂದ್ರ ಹಾಗೂ ಕಾರ್ಯದರ್ಶಿ ಶ್ರೀಮತಿ ವೀಣಾ ಅಠವಲೆ ತಿಳಿಸಿದ್ದಾರೆ .
Kshetra Samachara
07/02/2021 08:56 am