ನವಲಗುಂದ: ಇತ್ತೀಚೆಗೆ ನವಲಗುಂದ ಪೋಲಿಸ್ ಠಾಣೆಯ ಸಿ.ಪಿ.ಐ ಸಿ.ಜಿ. ಮಠಪತಿಯವರು ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಂದ ಸನ್ಮಾನಿಸಲಾಯಿತು.
ನವಲಗುಂದ ನಗರದ ಮಾಡಲ್ ಹೈಸ್ಕೂಲಿನ ಆವರಣದಲ್ಲಿ 72 ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್,ತಹಶೀಲ್ದಾರ ನವೀನ ಹುಲ್ಲೂರ, ಪೊಲೀಸ್ ಅಧಿಕಾರಿಗಳು, ಶಾಲಾ ಸಿಬ್ಬಂದಿಗಳು ಜನಪ್ರತಿನಿಧಿಗಳು,ನಗರದ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
26/01/2021 07:42 pm