ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜ.26 ಸಂವಿಧಾನ ಅನುಷ್ಠಾನ ಜಾಗೃತಿ ಜಾಥಾ

ಹುಬ್ಬಳ್ಳಿ: ಕರ್ನಾಟಕ ದಲಿತ ವಿಮೋಚನಾ ಸಮಿತಿ ಧಾರವಾಡ ಜಿಲ್ಲಾ ಘಟಕದ ವತಿಯಿಂದ, ಜನೇವರಿ 26 ಸಂವಿಧಾನ ಅನುಷ್ಠಾನ ದಿನಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು, ಘಟಕದ ಸಂಸ್ಥಾಪನಾ ಅಧ್ಯಕ್ಷ ಸುರೇಶ ಖಾನಾಪುರ ತಿಳಿಸಿದರು.

ಮುಂಜಾನೆ 10:30 ಕ್ಕೆ ಸಂವಿಧಾನ ಅನುಷ್ಠಾನ ಜಾಗೃತಿ ಜಾಥಾ ಆರಂಭವಾಗಿ, ರಾಯ್ಕರ್ ಮೈದಾನದಿಂದ ಚೆನ್ಮಮ್ಮ ವೃತ್ತದ ಮೂಲಕ ನಗರದ ಪ್ರಧಾನ ಅಂಚೆ ಕಛೇರಿ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಮುಕ್ತಾಯಗೊಳ್ಳುವದು ಎಂದರು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲೆಗಳು ವಾದ್ಯ ಮೇಳ, ಜಗ್ಗಲಗಿ ಮೇಳ, ಹಲಗಿ ಮೇಳ, ಗೊಂಬೆ ಕುಣಿತ ಸೇರಿದಂತೆ ಭಾವಚಿತ್ರ ಪ್ರದರ್ಶನಗೊಳ್ಳಲಿವೆ.ಜಾಗೃತಿ ಜಾಥಾ ಉದ್ಘಾಟನೆಯನ್ನು ವಿ.ಪ ಸದಸ್ಯ ಪ್ರದೀಪ ಶೆಟ್ಟರ್ ನೆರವೇರಿಸಲಿದ್ದಾರೆ.ಸಹಾಯಕ ಪೋಲಿಸ್ ಆಯುಕ್ತ ಡಾ. ವಿನೋದ ಮುಕ್ತೆದಾರ, ಇರಲಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

25/01/2021 05:12 pm

Cinque Terre

18.5 K

Cinque Terre

0

ಸಂಬಂಧಿತ ಸುದ್ದಿ