ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ.26 ರಂದು ಸರಳ ಗಣರಾಜ್ಯೋತ್ಸವ ಆಚರಣೆ:ತಹಶೀಲ್ದಾರ ಶಶಿಧರ ಮಾಡ್ಯಾಳ

ಹುಬ್ಬಳ್ಳಿ :ಕೋವಿಡ್ -19 ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ಜ.26 ರಂದು ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗುವುದು ಎಂದು ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು.

ಈ ಕುರಿತು ಮಿನಿ ವಿಧಾನಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಜರುಗಿದ ಪೂರ್ವ ಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ಕಳೆದ ವರ್ಷ ಅದ್ದೂರಿಯಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗಿತ್ತು. ಈ ಬಾರಿ ಕೊವಿಡ್ 19 ಮುಂಜಾಗೃತ ಕ್ರಮ ವಹಿಸಿ ಸರಳವಾಗಿ ಆಚರಿಸಲಾಗುವುದು. ನಗರದ ನೆಹರು ಕ್ರೀಡಾಂಗಣದಲ್ಲಿ ಜನವರಿ 26 ರಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು. ಧ್ಚಜಾರೋಹಣದೊಂದಿಗೆ ರಾಷ್ಟ್ರಗೀತೆ ಗಾಯನ ಮಾಡಲಾಗುದು. ನಂತರ ನಾಡಗೀತೆ ಹಾಗೂ ರೈತಗೀತೆಗಳನ್ನು ಹಾಡಲಾಗುವುದು. ಪಥ ಸಂಚಲನ ಕಾರ್ಯಕ್ರಮ ಜರುಗುವುದು . ಈ ಬಾರಿ ಶಾಲಾ ಮಕ್ಕಳಿಗೆ ಪಥ ಸಂಚಲ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ.

ಎಲ್ಲಾ ಅಧಿಕಾರಿಗಳು, ಶಾಲಾ ಶಿಕ್ಷಕರು,ಮುಖ್ಯೋಪಾಧ್ಯಾಯರು ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮಕ್ಕೆ ಹಾಜರಾಗಬೇಕೆಂದು ಹೇಳಿದರು.

ಸಭೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ , ಶಾಲಾ ಕಾಲೇಜುಗಳು ಹಾಗೂ ಕ್ರೀಡಾಕೂಟದಲ್ಲಿ ಸಾಧನಗೈದವರನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಯಿತು.

ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಸಾಧನೆ ಮಾಹಿತಿಯನ್ನು ಹೆಸರು ಹಾಗೂ ವಿವರಗಳೊಂದಿಗೆ ಜ.23 ರೊಳಗಾಗಿ ತಹಶೀಲ್ದಾರ ಕಚೇರಿಗೆ ತಲುಪಿಸಬೇಕು. ಆರಕ್ಷಕರು, ಹೋಮ ಗಾರ್ಡ್ ನೆಹರು ಮೈದಾನದ ಪೂರ್ವ ಪರಿಶೀಲನೆ ಹಾಗೂ ಕಾರ್ಯಕ್ರಮದ ಆಚರಣೆಗೆ ಸಮಸ್ಯೆ ಬರದಾಗೆ ನೋಡಿಕೊಳ್ಳಲು ಸೂಚಿಸಿಲಾಯಿತು.

Edited By : Nirmala Aralikatti
Kshetra Samachara

Kshetra Samachara

12/01/2021 06:36 pm

Cinque Terre

17.04 K

Cinque Terre

0

ಸಂಬಂಧಿತ ಸುದ್ದಿ