ಧಾರವಾಡ: ರಮೇಶ ಪರವಿನಾಯ್ಕರ್ ಅವರು ಧಾರವಾಡ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷವಾದ ಹಿನ್ನೆಲೆಯಲ್ಲಿ ಅವರು, ಒಂದು ವರ್ಷದ ಅವಧಿಯಲ್ಲಾದ ಸಾಧನೆಗಳ ಕಿರುಹೊತ್ತಿಗೆಯನ್ನು ಮಂಗಳವಾರ ಬಿಡುಗಡೆ ಮಾಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣದ ನಿರ್ದೇಶಕರಾಗಿ ನೇಮಕಗೊಂಡ ನಂತರ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನವನ್ನು ಹೈಟೆಕ್ ಸಮುಚ್ಚಯ ಭವನವನ್ನಾಗಿ ನಿರ್ಮಾಣ ಮಾಡಲಾಗಿದೆ. ವಾರಾಂತ್ಯ ನಾಟಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಂಗ ಅಭಿನಯ ರಸಾನುಭವ ಶಿಲ್ಪ ಶಿಬಿರ ಎಂಬ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಂಗಾಯಣದ ಆವರಣವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲಾಗಿದೆ ಎಂದರು.
ರಂಗಧ್ವನಿ ಎಂಬ ಕಾರ್ಯಕ್ರಮ ಮಾಡಲಾಗಿದ್ದು, ರಂಗಾಯಣಕ್ಕೆ ರೆಪರ್ಟರಿ ಕಲಾವಿದರನ್ನು ಕೂಡ ನೇಮಕ ಮಾಡಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಜಾನಪದ ನಾಟಕಗಳ ಮರು ನಿರ್ಮಾಣ, ಸಂಸ್ಕೃತಿ ಮತ್ತು ಬಹುತ್ವ ಸಾರುವ ನಾಟಕೋತ್ಸವ ಆಯೋಜನೆ ಮಾಡುವುದು, ಶಾಲೆಗಳತ್ತ ರಂಗಾಯಣ, ಗ್ರಾಮೀಣ ನಾಟಕೋತ್ಸವ, ರಂಗಾಯಣದ ಬಯಲು ರಂಗಮಂದಿರಕ್ಕೆ ಹೊಂದಿಕೊಂಡಂತೆ 300 ಪ್ರೇಕ್ಷಕ ಸಾಮರ್ಥ್ಯದ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ರಂಗಾಯಣದ ಆಡಳಿತಾಧಿಕಾರಿ ಡಾ.ಗೋಪಾಲಕೃಷ್ಣ, ಪಾಂಡುರಂಗ ಪಾಟೀಲ, ಬಾಳಣ್ಣ ಶೀಗಿಹಳ್ಳಿ, ಕೆ.ಎಚ್.ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.
Kshetra Samachara
05/01/2021 02:40 pm