ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಮ್ಮಾರಿ ಕೊರೊನಾ ಶಮನಕ್ಕಾಗಿ ಮುನಿಗಳ ಪ್ರಾರ್ಥನೆ

ಹುಬ್ಬಳ್ಳಿ: ವಿಶ್ವಕ್ಕೆ ಮಾರಕವಾಗಿರುವ ಕರೊನಾ ಶಮನವಾಗಲಿ, ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಆಚಾರ್ಯರಾದ ಕುಂಥುಸಾಗರ, ಗುಣಧರನಂದಿ, ದೇವನಂದಿ ಮಹಾರಾಜರು ಎಂದು ಪ್ರಾರ್ಥಿಸಿದ್ದಾರೆ.

ವರೂರು ನವಗ್ರಹ ತೀರ್ಥದಲ್ಲಿ ಗಣಾಧಿಪತಿ ಗಣಧರಾಚಾರ್ಯ ಭಾರತ ಗೌರವ ಶ್ರೀ ಕುಂಥುಸಾಗರ ಮಹಾರಾಜರ ಅಂತಾರಾಷ್ಟ್ರೀಯ ಅಮೃತ ಮಹೋತ್ಸವ ಅಂಗವಾಗಿ ಬುಧವಾರ ವೆಬಿನಾರ್ ಮೂಲಕ ವಿವಿಧ ಧಾರ್ವಿುಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಮಾರ್ಗದರ್ಶನ ಹಾಗೂ ಸಾರಸ್ವತಾಚಾರ್ಯ ಶ್ರೀ ದೇವನಂದಿ ಮಹಾರಾಜರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ, ಕಾರ್ಕಳ ಸೇರಿ 75 ತೀರ್ಥ ಕ್ಷೇತ್ರ ಹಾಗೂ ಜಿನ ಮಂದಿರಗಳಲ್ಲಿ ಮಹಾಮಸ್ತಕಾಭಿಷೇಕ ನೆರವೇರಿತು.

75 ಮಹಿಳಾ ಮಂಡಳ, ಯುವಕ ಮಂಡಳ, ಬಾಲಿಕಾ ಮಂಡಳಗಳಿಂದ ಗುರು ವಂದನಾ, ಗಣಧರ ಆಚಾರ್ಯ ವಿಧಾನ ನಡೆಯಿತು. ಶ್ರಾವಕ, ಶ್ರಾವಕಿಯರು ತಮ್ಮ ಮನೆಗಳಿಂದ ಆಚಾರ್ಯಶ್ರೀಗಳಿಗೆ ವಂದನೆ ಸಲ್ಲಿಸಿದರು. 75 ದೀಪ ಹಾಗೂ ಅಷ್ಟದ್ರವ್ಯಗಳಿಂದ ಮಹಾರಾಜರಿಗೆ ಪೂಜೆ ಹಾಗೂ ಅರ್ಚನೆ ಸಲ್ಲಿಸಲಾಯಿತು.

Edited By : Vijay Kumar
Kshetra Samachara

Kshetra Samachara

31/12/2020 01:04 pm

Cinque Terre

34.8 K

Cinque Terre

3

ಸಂಬಂಧಿತ ಸುದ್ದಿ