ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಯಶಸ್ವಿ ಪ್ರದರ್ಶನ ಕಂಡ ಸಾಮ್ರಾಟ್ ಅಶೋಕ ನಾಟಕ

ಧಾರವಾಡ: ಕೊರೊನಾದಿಂದಾಗಿ ಕಳೆ ಕಳೆದುಕೊಂಡಿದ್ದ ಧಾರವಾಡದ ರಂಗಾಯಣದ ರಂಗಭೂಮಿ ಭಾನುವಾರ ರಾತ್ರಿ ಅಕ್ಷರಶಃ ಕಳೆಗಟ್ಟಿತ್ತು.

ರಂಗಾಸಕ್ತರ ದಂಡೇ ಅಲ್ಲಿ ಹರಿದು ಬಂದಿತ್ತು. ಇದಕ್ಕೆ ಕಾರಣ ಸಾಮ್ರಾಟ್ ಅಶೋಕ ನಾಟಕ.

ರಂಗಾಯಣದ ರೆಪರ್ಟರಿ ಕಲಾ ತಂಡದವರು ನಡೆಸಿಕೊಟ್ಟ ಸಾಮ್ರಾಟ್ ಅಶೋಕ ನಾಟಕ ರಂಗಾಯಣದ ಬಯಲು ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನವಾಯಿತು.

ಈ ನಾಟಕ ನೋಡಲು ರಂಗಾಯಸಕ್ತರು ದೊಡ್ಡಮಟ್ಟದಲ್ಲಿ ಬಂದಿದ್ದು ವಿಶೇಷವಾಗಿತ್ತು. ಕೊರೊನಾ ನಿಯಮಾವಳಿಗಳ ಪ್ರಕಾರವೇ ಈ ನಾಟಕ ಪ್ರದರ್ಶನ ಮಾಡಲಾಯಿತು.

ಸಾಮ್ರಾಟ್ ಅಶೋಕ ನಾಟಕದ ಮೂಲ ರಚನಾಕಾರರು ಪದ್ಮಶ್ರೀ ದಯಾಪ್ರಕಾಶ ಸಿನ್ಹಾ. ಇದನ್ನು ಡಾ.ಶಶಿಧರ ನರೇಂದ್ರ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

28/12/2020 10:14 am

Cinque Terre

35.21 K

Cinque Terre

1

ಸಂಬಂಧಿತ ಸುದ್ದಿ