ನವಲಗುಂದ : ಈದ್ ಮಿಲಾದ್ ಹಬ್ಬದ ಪ್ರಯುಕ್ತ ನವಲಗುಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿರುವಂತಹ ಬಡ ರೋಗಿಗಳಿಗೆ ಸುಲ್ತಾನ್ ಸೌಹಾರ್ದ ಯಂಗ್ ಕಮೀಟಿ ವತಿಯಿಂದ ಹಣ್ಣು-ಹಂಪಲ್ ವಿತರಣೆ ಮಾಡಲಾಯಿತು.
ಈ ವೇಳೆ ಸುಲ್ತಾನ್ ಸೌಹಾರ್ದ್ ಯಂಗ್ ಕಮೀಟಿಯ ಅಧ್ಯಕ್ಷ ಸಿರಾಜುದ್ದೀನ ಧಾರವಾಡ ಮಾತನಾಡಿ, ಇವತ್ತು ಪ್ರವಾದಿ ಮಹಮ್ಮದ್ ರವರ ಜನ್ಮದಿನ ಈ ಖುಷಿಯ ಸಮಯದಲ್ಲಿ ತಾಲೂಕಾ ಆಸ್ಪತ್ರೆಯಲ್ಲಿರುವಂತಹ ರೋಗಿಗಳಿಗೆ ಹಣ್ಣು ಹಂಪಲ್ ವಿತರಣೆ ಮಾಡುವುದರ ಜೊತೆಗೆ ಅವರು ಬೇಗ ಗುಣಮುಖರಾಗಿ ಮನೆಗೆ ಮರಳಲಿ ಎಂದು ಅಲ್ಲಾಹುವಿನಲ್ಲಿ ದುವಾ ಮಾಡಿದ್ದೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ಈದ್ ಮಿಲಾದ ಹಬ್ಬದ್ ಖುಷಿಯನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕು ಎನ್ನುವ ಮನೋಭಾವನೆಯೊಂದಿಗೆ ಸುಲ್ತಾನ್ ಸೌಹಾರ್ದ ಯಂಗ್ ಕಮೀಟಿಯ ಯುವ ಮಿತ್ರರು ಸರ್ಕಾರಿ ಆಸ್ಪತ್ರೆಯಲ್ಲಿರುವಂತಹ ರೋಗಿಗಳಿಗೆ ಹಣ್ಣು-ಹಂಪಲ್ ವಿತರಣೆ ಮಾಡಿದ್ದು, ತುಂಬಾ ಶ್ಲಾಘನೀಯ ಕಾರ್ಯವಾಗಿದೆ. ಇಸ್ಲಾಂ ಧರ್ಮದ ಸಂಸ್ಥಾಪಕರಾದ ಪ್ರವಾದಿ ಹಜರತ್ ಮಹಮ್ಮದರವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರು ಬದುಕು ನಡೆಸಿ ಆದರ್ಶವಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಯುವ ಮುಖಂಡ ಅನ್ವರ ಮೂಲಿಮನಿ, ಮಕ್ತುಮಸಾಬ ಕೊಣ್ಣೂರ, ಇಮ್ತಿಯಾಜ್ ಜಮಖಾನ್, ಮಹಮ್ಮದ್ ಮಟಗೇರ, ಶಾನು ಧಾರವಾಡ, ಅಲ್ತಾಪ್ ಕೆರೂರ್, ಮಾಬುಸಾಬ ಕೆರೂರ, ರುದ್ರಪ್ಪ ಕಟ್ಟಿ, ಫಾರುಕ ಜಮಖಾನ, ಯಾಸಿನ್ ಮೂಲಿಮನಿ, ಇಮಾಮ್ ಕರ್ನಾಚಿ, ರಿಯಾಜ್ ಅಲ್ಲಿಬಾಯಿ, ಜಿಲಾನಿ ಮಕಾಂದಾರ,ಆಶೀಪ್ ನದಾಫ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
Kshetra Samachara
09/10/2022 06:50 pm