ಹುಬ್ಬಳ್ಳಿ: ದಸರಾ ನವರಾತ್ರಿ ಹಬ್ಬದ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಹುಬ್ಬಳ್ಳಿ ಮಾಹನಗರ ಘಟಕದ ವತಿಯಿಂದ ಶ್ರೀ ದುರ್ಗಾಮಾತಾ ದೌಡ ಮತ್ತು ಪೂರ್ಣ ಕುಂಭ ಮೆರವಣಿಗೆಯನ್ನು ನಗರದ ಮಂಜುನಾಥ ನಗರದ ಅಂಗಾರಕ ಸಂಕಷ್ಠಿ ಗಣಪತಿ ದೇವಸ್ಥಾನದಿಂದ ಆರಂಭವಾಯಿತು.
ನೂರಾರು ಮಹಿಳೆಯರು ಕುಂಭವನ್ನು ಹೊತ್ತುಕೊಂಡು ಗಣಪತಿ ದೇವಸ್ಥಾನದಿಂದ ಪ್ರಾರಂಭವಾಗಿ ಜೆಪಿ ನಗರ ಮುಖಾಂತರ ಶ್ರೀ ಶಕ್ತಿ ದೇವಿ ಗುಡಿ ಹತ್ತಿರ ಬಂದು ಏಳು ಮಕ್ಕಳ ತಾಯಿ ದೇವಸ್ಥಾನಕ್ಕೆ ಬಂದು ಅಂತಿಮವಾಯಿತು. ಈ ಸಂದರ್ಭದಲ್ಲಿ ಸುಮಂಗಲಿಯರು ನಗರದ ವೇದಿಕೆಯ ಮುಖಂಡರು ಭಾಗವಹಿಸಿದ್ದರು.
Kshetra Samachara
30/09/2022 12:33 pm