ಹುಬ್ಬಳ್ಳಿ: ಇತಿಹಾಸ ಪ್ರಸಿದ್ಧ ಹುಬ್ಬಳ್ಳಿಯ ಹೊಸೂರಿನ ಗ್ರಾಮ ದೇವತೆ ಶ್ರೀ ಗಾಳಿದುರ್ಗಮ್ಮಾ ದೇವಿ ಜಾತ್ರಾ ಮಹೋತ್ಸವವನ್ನು, ಮಂಗಳವಾರ ದಿ. 19ರಂದು ವಿಜೃಂಭಣೆಯಿಂದ ಹಿರೇಕೆರೂರ ಕುಟುಂಬ ಆಚರಿಸುತ್ತಿದೆ.
ಹೌದು,,, ಸುಮಾರು 120 ವರ್ಷಗಳಿಂದ ಹಿರೇಕೆರೂರ ಕುಟುಂಬ ದೇವಿ ಸೇವೆ ಮಾಡ್ತಾ ಬಂದಿದ್ದಾರೆ. ಅದೇ ರೀತಿ ಯಲ್ಲಪ್ಪ ಹನಮಂತಪ್ಪ ಹಿರೇಕೆರೂರ, ಲಕ್ಷ್ಮಣ ಹನಮಂತಪ್ಪ ಹಿರೇಕೆರೂರ ಅವರ ಜೊತೆಗೆ ಹೊಸೂರಿನ ಹಿರಿಯರು ಕೂಡ ಇವರ ಹೆಗಲಿಗೆ ಹೆಗಲು ಕೊಟ್ಟು, ಸುಮಾರು 60 ವರ್ಷಗಳಿಂದ ಶ್ರೀ ಗಾಳಿ ದೇವಿ ದುರ್ಗಮ್ಮ ದೇವತೆಯ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ.
ಅದೇ ರೀತಿಯಾಗಿ ನಾಳೆ ಮಂಗಳವಾರ ದಿನದಂದು ಶ್ರೀ ಶಕ್ತಿ ಸ್ವರೂಪಿಣಿ ಜಗನ್ಮಾತೆ ನಮೊಸ್ತುತೆ, ಶ್ರೀ ಗಾಳಿ ದುರ್ಗಮ್ಮದೇವಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ಜಾತ್ರಾಮಹೋತ್ಸವವನ್ನು ರದ್ದುಗೊಳಿಸಲಾಗಿತ್ತು. ಈ ವರ್ಷ ಶ್ರೀ ಗಾಳಿ ದುರ್ಗಮ್ಮ ದೇವಿ ಜಾತ್ರಾಮಹೋತ್ಸವಕ್ಕೆ ಮತ್ತೇ ಮೆರಗು ಬರಲಿದೆ.
ಸಧ್ಯ ಶ್ರೀ ದೇವಿ ಜಾತ್ರಾ ಮಹೋತ್ಸವವನ್ನು ಶಿವಣ್ಣ ವಾಯ್ ಹಿರೆಕೇರೂರ, ಚೇತನ್ ಎಸ್ ಹಿರೇಕೆರೂರ, ಹುಚ್ಚರಾಯಪ್ಪ ಕೆ.ಹಿರೇಕೆರೂರ, ಪ್ರಭು ಹಿರೆಕೇರೂರ ನಡೆಸುತ್ತಾ ಬಂದಿದ್ದು, ಇವರಿಗೆ
ಷಣ್ಮುಖ ಕಟ್ಟಿ, ಹನಮಂತ ಹತ್ತಿಬೆಳಗಲ್, ಹನಮಂತಪ್ಪ ಪವಾಡೆ, ಬಂಟಿ ರೇವಣಕರ್, ಸುನಿಲ್ ದಳವಿ, ಸತೀಶ್ ಪಲ್ಟಂಕರ್, ಪ್ರಕಾಶ ತಿಳವಳ್ಳಿ, ದಿನೇಶ್ ಪಟಂಕರ್, ಶಿವಣ್ಣ ಗಾಮನಗಟ್ಟಿ, ಗುರುನಾಥ ಉಳ್ಳಿಕಾಶಿ ಪ್ರೇಮನಾತ್ ಚಿಕ್ಕತುಂಬಳ, ಆನಂದ ಬೆವಿಕಟ್ಟಿ, ಅನಿಲ್ ಹಿರೇಕೆರೂರ, ಹಿರೇಕೆರೂರ ಕುಟಂಬಸ್ಥರು ಹಾಗೂ ಜೈ ಶ್ರೀ ಗಾಳಿದುರ್ಗಮ್ಮಾ ತಾಯಿ ಸೇವಾ ಯುವಕ ಮಂಡಳ ಹೊಸುರ ಹುಬ್ಬಳ್ಳಿ, ಹಾಗೂ ಹೊಸೂರು ಬಳಗದ ವತಿಯಿಂದ ದೇವಿಯ ಈ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ.
ಶ್ರೀ ಗಾಳಿದುರ್ಗಮ್ಮ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ನಾಳೆ ರಾತ್ರಿ 8:30 ಕ್ಕೆ ಅನ್ನಪ್ರಸಾದ ಸೇವೆಯನ್ನು ಹೊಸೂರಿನ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣದ ಎದುರುಗಡೆ ಆಯೋಜಿಸಲಾಗಿದೆ. ಯಾರಿಂದಲೂ ಧನ ಸಹಾಯ ಪಡೆಯದೇ ಹಿರೇಕೆರೂರ ಕುಟುಂಬ ಜಾತ್ರಾಮಹೋತ್ಸವ ಆಚರಿಸುತ್ತಿರುವುದು ಅವರ ಭಕ್ತಿಯ ಪ್ರತೀಕವಾಗಿದೆ. .
ಮಂಗಳವಾರ ಮುಂಜಾನೆ 5 ಗಂಟೆಗೆ ಅಭಿಷೇಕ, ಮಹಾವಿಶೇಷ ಪೂಜೆ ಹಾಗೂ ಉಡಿತುಂಬುವುದು, ಮಧ್ಯಾಹ್ನ 12 ಗಂಟೆಗೆ ಕುಂಭ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆ ಜರುಗಲಿದೆ. ಆದ್ದರಿಂದ ಸಾವಿರಾರು ಭಕ್ತರು ಆಗಮಿಸಿ ದೇವಿನ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕು ಎಂದು ಹೊಸೂರು ಸೇವಾ ಯುವಕ ಮಂಡಳ ಕೋರಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/07/2022 10:29 pm