ಕಲಘಟಗಿ: ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಕಲ್ಮೇಶ್ವರ ಜಾತ್ರಾಮಹೋತ್ಸವದ ವಿಶಿಷ್ಟವಾಗಿಯೇ ನಡೆಯಿತು.ಕಲ್ಮೇಶ್ವರ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ ಭಯ-ಭಕ್ತಿಯಿಂದ ನಡೆದುಕೊಂಡರು.
ಜಾತ್ರಾ ಮಹೋತ್ಸವದಲ್ಲಿ ರಾತ್ರಿ ಸಮಯದಲ್ಲಿ ಕೆಲವೊಂದು ಭಕ್ತರು ತಮ್ಮ ಬೇಡಿಕೆ ಈಡೇರಿಕೆ ಮುಂದಾಗುತ್ತಾರೆ. ಕಲ್ಮೇಶ್ವರ ದೇವಸ್ಥಾನದ ಆವರಣದ ಮುಂಭಾಗದಲ್ಲಿ ಕಟ್ಟಿಗೆಯಿಂದ ಮೊದಲು ಬೆಂಕಿ ತಯಾರಿಸುತ್ತಾರೆ.
ನಂತರ ಬೆಂಕಿಯ ಕೆಂಡದ ಓಕುಳಿಯಾಡುವ ಭಕ್ತರು ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಮೀರಿ ಮೀರಿ ಮಿನುಗುವ ಬೆಂಕಿಯ ರಾಶಿಯಲ್ಲಿ ಮೈಮೇಲೆ ಯಾವುದೆ ಬಟ್ಟೆ ಇಲ್ಲದೆ ಒಬ್ಬರಿಗೊಬ್ಬರು ಬೆಂಕಿ ಎರಚಾಡಿಕೊಳ್ತಾರೆ. ಈ ಮೂಲಕ
ಕೆಂಡದ ಓಕಳಿ ಆಡುವುದು ನಿಜಕ್ಕೂ ವಿಶೇಷವೇ ಸರಿ. ಹಾಗೂ ಅಷ್ಟೇ ಆಕರ್ಷಕವೂ ಆಗಿದೆ.
ವರದಿ:ಉದಯ ಗೌಡರ
Kshetra Samachara
27/04/2022 10:04 pm