ಧಾರವಾಡ: ಹಿಂದೂಗಳ ಪುಣ್ಯಕ್ಷೇತ್ರಗಳಲ್ಲಿ ಕಾಶಿ ಕೂಡ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ನವ ಕಾಶಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾದ ಬಳಿಕವಂತೂ ಅನೇಕರು ಕಾಶಿ ನೋಡಲು ತುದಿಗಾಲ ಮೇಲೆ ನಿಂತಿದ್ದರು. ಅಂತಹ ಒಂದು ತಂಡವೀಗ ರಾಜ್ಯದಿಂದ ನಮಸ್ತೆ ಕಾಶಿ ಯಾತ್ರೆ ಆರಂಭಿಸಿದೆ.
ಹೌದು. ಬ್ಯಾಗ್‌ಗಳನ್ನು ಹಿಡಿದುಕೊಂಡು ರೈಲು ಹತ್ತಲು ತಯಾರಾಗಿ ನಿಂತಿರುವ ಗುಂಪು. ಗುಂಪಿನ ಮಧ್ಯೆ ಅಲ್ಲಲ್ಲಿ ಜನರ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರಗಳು ಕಂಡು ಬಂದವು. ಇಡೀ ಗುಂಪನ್ನು ಬೀಳ್ಕೊಡುತ್ತಿರುವ ಸ್ವಾಮೀಜಿ. ಇದು ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಇಂದು ಕಂಡು ಬಂದ ದೃಶ್ಯ.
ಧಾರವಾಡ ರೈಲ್ವೆ ನಿಲ್ದಾಣದಲ್ಲಿ ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಇಂದು 150 ಜನ ಕಾಶಿ ಯಾತ್ರಾರ್ಥಿಗಳನ್ನು ಬೀಳ್ಕೊಟ್ಟರು. ಈ ಯಾತ್ರೆಯಲ್ಲಿ ಧಾರವಾಡದ ಜನರೇ ಹೆಚ್ಚಿದ್ದು, ಅದರ ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರಿದ್ದಾರೆ.
Kshetra Samachara
15/02/2022 07:45 pm