ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ನವಲಗುಂದ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಬುಧವಾರ ನವಲಗುಂದ ಪುರಸಭೆಯ ಸದಸ್ಯ ಹನಮಂತ ವಾಲಿಕಾರ ಹಾಗೂ ಚಂದ್ರಲೇಖಾ ಮಳಗಿ ಸೇರಿದಂತೆ ಹಲವರಿಂದ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹನಮಂತ ವಾಲಿಕಾರ, ಧಾರವಾಡ ಜಿಲ್ಲೆಯಲ್ಲಿ ಅತಿ ದೊಡ್ಡ ವಾಲ್ಮೀಕಿ ಸಮುದಾಯ ಭವನ ನವಲಗುಂದ ನಗರದಲ್ಲಿ ಎನ್.ಹೆಚ್. ಕೋನರಡ್ಡಿ ಅವರು ಶಾಸಕರಿದ್ದ ಅವಧಿಯಲ್ಲಿ 2 ಕೋಟಿ ಬಿಡುಗಡೆ ಮಾಡಿದ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ಜಾಗೆಯ ಕೊರತೆಯಿದ್ದಾಗ ಕೆ.ಎನ್. ಗಡ್ಡಿ ಅವರು ಶಾಸಕರಿದ್ದ ಅವಧಿಯಲ್ಲಿ 1 ಎಕರೆ ಜಮೀನು ಭೂದಾನ ಮಾಡಿದ್ದರು. ಇನ್ನು ಕಟ್ಟಡ ನಿರ್ಮಿಸಲು 2 ಕೋಟಿ ರೂ. ಅನುದಾನ ನೀಡಿ, ಭೂ-ಒಡೆತನ ಯೋಜನೆಯಡಿ ಸರ್ಕಾರದಿಂದ ಜಮೀನು ಖರೀದಿ, ಸ್ವಯಂ ಉದ್ಯೋಗ ಯೋಜನೆಯಡಿ ಸಹಾಯ ಧನ ಮಂಜೂರ ಮಾಡಿಸಿ, ವಾಲ್ಮೀಕಿ ಸಮುದಾಯ ಜನಾಂಗದವರಿಗೆ ಅನುಕೂಲ ಕಲ್ಪಿಸಿಕೊಟ್ಟ ಮಾಜಿ ಶಾಸಕರಾದ ಎನ್.ಹೆಚ್. ಕೋನರಡ್ಡಿ ಅವರಿಗೆ ನಮ್ಮ ಸಮಾಜ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತವೆ ಎಂದರು.

ಈ ಸಂದರ್ಭದಲ್ಲಿ ಜೆ.ಡಿ.ಎಸ್ ತಾಲೂಕಾ ಅಧ್ಯಕ್ಷರಾದ ದೇವೆಂದ್ರಪ್ಪ ಹಳ್ಳದ, ಪುರಸಭೆ ವಿರೋಧ ಪಕ್ಷದ ನಾಯಕ ಅಪ್ಪಣ್ಣ ಹಳ್ಳದ, ಸದಸ್ಯರುಗಳಾದ ಪ್ರಕಾಶ ಶಿಗ್ಲಿ, ಜೀವನ ಪವಾರ, ಬಾಬಾಜಾನ ಮಕಾನದಾರ, ಮೋದಿನಸಾಬ ಶಿರೂರ, ಸುರೇಶ ಮೇಟಿ, ಮಹಾಂತೇಶ ಭೋವಿ, ಹುಸೇನಬಿ ಧಾರವಾಡ, ನಂದಿನಿ ಹಾದಿಮನಿ, ಶರಣು ಯಮನೂರ, ಹನಮಂತಪ್ಪ ಮಳಗಿ, ಯಲ್ಲಪ್ಪ ಶ್ಯಾಗೋಟಿ, ಅರ್ಜುನ ತಳವಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/10/2021 01:30 pm

Cinque Terre

8.53 K

Cinque Terre

0

ಸಂಬಂಧಿತ ಸುದ್ದಿ