ನವಲಗುಂದ: ಕಾರ್ತಿಕ ಮಾಸದ ಸಡಗರ ಈಗ ಜನರ ಮನದಲ್ಲಿ ಮನೆ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶನಿವಾರ ರಾತ್ರಿ ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಗ್ರಾಮಸ್ಥರು ಬಹು ಸಡಗರ ಸಂಭ್ರಮದಿಂದ ದೇವಸ್ಥಾನಗಳಲ್ಲಿ ದೀಪಗಳನ್ನು ಅಲಂಕರಿಸಿ ಭಕ್ತಿಯಿಂದ ಆಚರಣೆಯಲ್ಲಿ ಭಾಗಿಯಾದರು.
ಅಳಗವಾಡಿ ಗ್ರಾಮದ ದುರ್ಗಾ ದೇವಿ ದೇವಸ್ಥಾನ ಮತ್ತು ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಗ್ರಾಮಸ್ಥರು ದೀಪಗಳಿಂದ ಮತ್ತು ರಂಗೋಲಿಗಳಿಂದ ದೇವಸ್ಥಾನ ಮತ್ತು ದೇವಸ್ಥಾನದ ಆವರಣವನ್ನು ಶೃಂಗರಿಸಿ, ದೀಪೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.
Kshetra Samachara
05/12/2021 09:05 am