ಧಾರವಾಡ: ಇಂದಿನಿಂದ ರಾಜ್ಯದಾದ್ಯಂತ ಹಿಂದೂ ದೇವಾಲಯಗಳಲ್ಲಿ ಸುಪ್ರಭಾತ ಮೊಳಗಿಸುವ ಅಭಿಯಾನಕ್ಕೆ ಚಾಲನೆ ದೊರೆತಿದೆ. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಹಿಂದೂ ದೇವಾಲಯಗಳಲ್ಲೂ ಬೆಳಿಗ್ಗೆ ಸುಪ್ರಭಾತ ಮೊಳಗಿಸಬೇಕು ಎಂದು ಎಲ್ಲಾ ದೇವಸ್ಥಾನ ಕಮಿಟಿಯವರಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಧಾರವಾಡದ ಕಾಕರ ಮಸೀದಿ ಎದುರಿಗೆ ಇರುವ ರಾಮ ಮಂದಿರದಲ್ಲಿ ಬೆಳಿಗ್ಗೆ ಅಜಾನ್ ಕೂಗುವ ವೇಳೆಯೇ ಸುಪ್ರಭಾತ ಮೊಳಗಿದೆ.
ಇದೇ ಒಂದೇ ದೇವಸ್ಥಾನ ಅಲ್ಲದೇ ತುಳುಜಾ ಭವಾನಿ ದೇವಸ್ಥಾನ ಸೇರಿದಂತೆ ಧಾರವಾಡ ಅನೇಕ ದೇವಸ್ಥಾನಗಳಲ್ಲೂ ಬೆಳಿಗ್ಗೆ 5-05ಕ್ಕೆ ಸುಪ್ರಭಾತ ಮೊಳಗಿದೆ. ಕಾಕರ ಮಸೀದಿ ಮುಂಭಾಗದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಿನಜಾವವೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Kshetra Samachara
09/05/2022 05:59 pm