ಹುಬ್ಬಳ್ಳಿ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಮಗೆಲ್ಲ ಸ್ವಲ್ಪ ಬಿಸಿಲು ಹತ್ತಿದರೇ ಸಾಕು ನಾವೆಲ್ಲರೂ ಯಾವುದಾದರೂ ನೆರಳು ಹುಡುಕಿಕೊಂಡು ಹೋಗುತ್ತೇವೆ. ಆದರೆ ನಮ್ಮ ಸಂಚಾರಿ ಪೊಲೀಸರು ಮಾತ್ರ ಹೀಗೆ ಮಾಡಲು ಸಾಧ್ಯವಿಲ್ಲ. ಎಂತಹ ಬಿಸಿಲಿನಯೂ ಕೂಡ ಕೆಲಸ ಮಾಡಲೇಬೇಕು. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ದಾಹವನ್ನು ನೀಗಿಸಲು ಹುಬ್ಬಳ್ಳಿಯಲ್ಲೊಂದು ವಿನೂತನ ಅಭಿಯಾನ ಜಾರಿಯಾಗಿದೆ.
ಹೌದು.. ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸ್ಟೀಲ್ ವಾಟರ್ ಬಾಟಲ್ ವಿತರಣೆ ಮಾಡುವ ಮೂಲಕ ಪೊಲೀಸ್ ಸಿಬ್ಬಂದಿಯ ದಾಹ ನೀಗಿಸುವ ಕಾರ್ಯಕ್ಕೆ ಕಟ್ಟಿ ಟ್ರೇಡರ್ಸ್ ಮುಂದಾಗಿದ್ದು, ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಅಪ್ಪಾಸಾಹೇಬ ಕಟ್ಟಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈಗಾಗಲೇ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಸಿಬ್ಬಂದಿಗಳಿಗೆ ಸ್ಟೀಲ್ ವಾಟರ್ ಬಾಟಲ್ ಕೊಡುವ ಮೂಲಕ ಬಿಸಿಲಿನ ತಾಪವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲಾಯಿತು.
Kshetra Samachara
10/03/2022 10:48 pm