ಧಾರವಾಡ: ಈ ಜೀವನವೇ ಹಾಗೆ.. ಅದ್ಯಾವಾಗ ಮುಗಿದು ಹೋಗುತ್ತದೆಯೋ ಎಂಬುದು ಗೊತ್ತೇ ಆಗುವುದಿಲ್ಲ. ಜೀವನ ಎಂಬ ದೊಂಬರಾಟದಲ್ಲಿ ಮಾಡಬೇಕಾದದ್ದನ್ನೆಲ್ಲವನ್ನೂ ನಾವು ಮಾಡುತ್ತೇವೆ. ಆದರೆ, ಹೊಟ್ಟೆ ಪಾಡಿಗಾಗಿ ನಾವು ಮಾಡುವ ಕಾಯಕ ಅಂತಿಂತವುಗಳಲ್ಲ.
ಎಲ್ಲರಿಗೂ ಶ್ರೀಮಂತಿಕೆಯ ಬದುಕು ಸಿಗುವುದಿಲ್ಲ. ಹುಟ್ಟುವಾಗ ಶ್ರೀಮಂತನಾಗಿಯೇ ಹುಟ್ಟಬೇಕು ಎಂದು ಯಾರೂ ಅರ್ಜಿ ಕೂಡ ಹಾಕಿರುವುದಿಲ್ಲ. ಮನುಷ್ಯ ಜನ್ಮಕ್ಕೆ ಬಂದಾಗ ಬರುವ ಕಷ್ಟಗಳನ್ನೆಲ್ಲ ನುಂಗಿ ದೊಂಬರಾಟದಲ್ಲಿ ಜಯ ಗಳಿಸುವವನೇ ನಿಜವಾದ ಮನುಷ್ಯ.
ಇವರು ಮಾಡುತ್ತಿರುವ ಕಾಯಕದಲ್ಲಿ ಎರಡು ಅರ್ಥಗಳಿವೆ. ಒಂದು ಇವರ ಹೊಟ್ಟೆಪಾಡು ಮತ್ತೊಂದು ಜನರಿಗೆ ಮನರಂಜನೆ ನೀಡುವುದು. ಇದೇ ರೀತಿ ಹಗ್ಗದ ಮೇಲಿನ ಬದುಕು ಇವರದ್ದು.
Kshetra Samachara
21/09/2021 10:42 pm