ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮುಸ್ಲಿಂ ಬಾಂಧವರ ನೇತೃತ್ವ ಗಣೇಶ ಚತುರ್ಥಿ; ಭಾವೈಕ್ಯತೆಗೆ ಸೈ

ಕುಂದಗೋಳ : ಇತಿಹಾಸ ಪ್ರಸಿದ್ಧ ಹಿಂದೂ ಮುಸ್ಲಿಂ ಕೋಮು ಸೌಹಾರ್ದತೆ ಮೊಹರಂ ಹಬ್ಬದಿಂದಲೇ ಖ್ಯಾತಿ ಪಡೆದ ಯರಗುಪ್ಪಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಹೊಸ ಸಂದೇಶ ಸಾರಿದ್ದಾರೆ.

ಜಾತಿ, ಧರ್ಮ, ಮತ, ಪಂಥ ಎಂಬ ಬೇಧ ಭಾವ ತೊರೆದು ಹಿಂದೂ ಮುಸ್ಲಿಂ ಬಾಂಧವರು ಗಜಾನನ ಯುವಕ ಮಂಡಳ ಸಂಘದವರು ಯರಗುಪ್ಪಿ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸರ್ವ ಧರ್ಮಿಯರು ಒಂದೇ ಎಂಬ ತತ್ವ ಅನುಸರಿಸಿದ್ದಾರೆ.

ಯರಗುಪ್ಪಿಯ ಮುಸ್ಲಿಂ ಬಾಂಧವರು ತಮ್ಮ ಹಬ್ಬದಂತೆ ಗಣೇಶ ಆಚರಣೆಗೂ ಮಹತ್ವ ನೀಡಿ ಗಜಾನನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅರ್ಚಕ ವೀರಭದ್ರಯ್ಯ ಹಿರೇಮಠ ಅವರು ನೇತೃತ್ವದಲ್ಲಿ ಪೂಜೆ ನೆರವೇರಿಸಿದ್ದಾರೆ. ವಿಶೇಷ ಅಂದ್ರೆ ಕಳೆದ 26 ವರ್ಷಗಳಿಂದ ಗಜಾನನ ಯುವಕ ಮಂಡಳದ ಕೊಠಡಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು ಇತ್ತೀಚ್ಚೆಗೆ ಮುಸ್ಲಿಂ ಬಾಂಧವರು ಸಹ ತಮ್ಮ ಹಬ್ಬದಂತೆ ಗಣೇಶ ಚತುರ್ಥಿ ಆಚರಣೆ ಮಾಡುತ್ತಿರುವುದು ತಾಲೂಕಿನೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/09/2022 01:54 pm

Cinque Terre

52.85 K

Cinque Terre

4

ಸಂಬಂಧಿತ ಸುದ್ದಿ